ಚಿಮ್ಮಡ ಪಿಕೆಪಿಎಸ್‌ಗೆ ಅವಿರೋಧ ಆಯ್ಕೆ

Unopposed election for Chimmada PKPS
ಚಿಮ್ಮಡ ಪ್ರಾಥಮಿಕ ಕಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಚನ್ನಪ್ಪ ಬಿಳ್ಳೂರ, ಪ್ರಭು ಗೋವಿಂದಗೋಳ ಅವರೊಂದಿಗೆ ಮುಖಂಡರು ಹಾಗೂ ಬೆಂಬಲಿಗರು ಸಂಭ್ರಮಿಸಿದರು.
Published on

ಚಿಮ್ಮಡ: ಗ್ರಾಮದ ಪ್ರಾಥಮಿಕ ಕಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ಅವಿರೋಧ ಆಯ್ಕೆ ನಡೆಯಿತು.

ಚುನಾವಣೆ ಪ್ರಕ್ರಿಯೆ ಬಳಿಕ ಅಧ್ಯಕ್ಷರಾಗಿ ಚನ್ನಪ್ಪ ಬಿಳ್ಳೂರ ಹಾಗೂ ಉಪಾಧ್ಯಕ್ಷರಾಗಿ ಪ್ರಭು ಗೋವಿಂದಗೋಳ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ತಾಲೂಕು ಸಹಕಾರಿ ಸಂಘಗಳ ಮಾರಾಟ ವಿಭಾಗದ ಅಧಿಕಾರಿ ಎಂ. ಎಸ್. ಘೋಲಪ ಘೋಷಿಸಿದರು.

ಗ್ರಾಪಂ ಮಾಜಿ ಅಧ್ಯಕ್ಷ ಬೀರಪ್ಪ ಹಳಮನಿ, ಗುರಲಿಂಗಪ್ಪ ಪೂಜಾರಿ ಹಾಗೂ ಪಿಕೆಪಿಎಸ್ ಹಿಂದಿನ ಅಧ್ಯಕ್ಷ ಹಣಮಂತ ನೇಸೂರ, ನಿರ್ದೇಶಕರಾದ ಶಂಕರ ಬಟಕುರ್ಕಿ, ನಿಂಗಣ್ಣ ಪೂಜಾರಿ, ವಿರುಪಾಕ್ಷ ಕುದರಿ, ರಾಮಪ್ಪ ಜಗದಾಳ, ಶಿದ್ರಾಮಪ್ಪ ಮುನ್ನೋಳಿ, ಮಲ್ಲಪ್ಪ ಜಾಂಗನೂರ, ಹಣಮಂತ ಕೋಳಿ, ಅನ್ನ ಪೂರ್ಣ ಹಪಳಬಸಪ್ಪ ಮುಗಳಖೋಡ, ಯಮನವ್ವ ನಾಗಪ್ಪ ನಾವಿ, ಮುಖಂಡರಾದ ಬೀರಪ್ಪ ಗಡದಿ, ಮನೋಜ ಹಟ್ಟಿ, ವ್ಯವಸ್ಥಾಪಕ ಎಂ.ವಿ. ವಜ್ಜರಮಟ್ಟಿ, ಮಲ್ಲಯ್ಯ ಮಠಪತಿ, ಮಹಾಲಿಂಗ ಹಳ್ಳೂರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net