ನೌಕರರ ಸಂಘದ 24 ಸ್ಥಾನಗಳಿಗೆ ಅವಿರೋಧ ಆಯ್ಕೆ

IMG-20241018-WA0153
Published on

ಕಡೂರು: ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಗಾಗಿ ತಾಲೂಕು ಘಟಕದ 24 ಇಲಾಖೆಗಳ 34 ಸ್ಥಾನಗಳಿಗೆ 24 ಜನ ನಿರ್ದೇಶಕ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 10 ಸ್ಥಾನಗಳಿಗೆ ಅ.28 ರಂದು ಆಯಾ ಇಲಾಖೆ ಕಚೇರಿಗಳಲ್ಲಿ ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿ ರೇವಣ್ಣ ತಿಳಿಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 24 ಸ್ಥಾನಗಳಲ್ಲಿ ಎಂ.ಅಶೋಕ(ಕೃಷಿ ), ಬಿ.ಸುರೇಶ್ (ಪಶುಸಂಗೋಪನೆ ), ಎಂ.ಎಚ್.ಮಂಜುನಾಥ್(ಲೋಕೋಪಯೋಗಿ), ಕೆ.ಎಲ್.ಶಿವಣ್ಣ (ಪಂಚಾಯತ್ ರಾಜ್ ),ಎಚ್.ಎಂ.ಶಿವಕುಮಾರ್,ಎಚ್.ಎಲ್.ಮುರುಳಿಧರ್ (ಪ್ರೌಢ ಶಾಲೆ) ವೈ.ಬಿ. ಹನುಮಂತಪ್ಪ(ಪದವಿ ಪೂರ್ವ ಶಿಕ್ಷಣ), ಡಿ.ಎಲ್.ಹರೀಶ್ (ಕಾಲೇಜು ಶಿಕ್ಷಣ ಇಲಾಖೆ), ರುದ್ರೇಶ್(ಬಿಸಿಎಂ), ಎಸ್.ರಾಜು (ಸಮಾಜ ಕಲ್ಯಾಣ ), ಎ.ಆರ್. ಪ್ರಮೀಳಾ(ಅರಣ್ಯ), ಕೆ.ಆರ್. ಸುರೇಶ್(ಸಾರ್ವಜನಿಕ ಆಸ್ಪತ್ರೆ), ರಂಗನಾಥ್ (ತಾಲೂಕು ಆರೋಗ್ಯಾಧಿಕಾರಿ ಕಚೇರಿ), ಎಚ್.ಎನ್.ಮಂಜುನಾಥ್, ಎಂ.ಜೆ.ಭಾರತಿ(ಆರೋಗ್ಯ ಇಲಾಖೆ), ಡಾ.ಹೇಮಂತ್ ಕುಮಾರ್(ಆಯುಷ್ ಇಲಾಖೆ), ಎಚ್.ಆರ್. ತೇಜಸ್ವಿನಿ (ತೋಟಗಾರಿಕೆ), ಟಿ.ಎಂ.ರಾಜಶೇಖರ್ (ಖಜಾನೆ ಶಾಖೆ) ಕೆ.ಎನ್. ಪ್ರಭು(ನ್ಯಾಯಾಂಗ ಇಲಾಖೆ), ಸಿ.ಆರ್. ಸರಸ್ವತಿ (ಸಿಡಿಪಿಒ), ಎನ್.ಕೆ. ಪಂಕಜ(ಮೀನುಗಾರಿಕೆ), ಎಂ.ಎಚ್. ಧರ್ಮರಾಜ್(ಎಪಿಎಂಸಿ), ಸುರೇಶ್ ವಟವಟಿ(ಅಬಕಾರಿ), ಕೆ.ಎಸ್.ವಿಜಯಕುಮಾರ್ (ಕೈಗಾರಿಕಾ ತರಬೇತಿ) ವಿಭಾಗದ ಇಲಾಖೆಗಳಲ್ಲಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದರು.

ಇನ್ನು 10 ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದ್ದು, ಕಂದಾಯ -1ವಿಭಾಗದಿಂದ ಆರ್.ರವಿಕುಮಾರ್ ಮತ್ತು ಸದಾಶಿವಪ್ಪ ಹಾಗೂ ಕಂದಾಯ -2 ವಿಭಾಗದಿಂದ ಜಿ.ಎಂ.ಕುಮಾರ್, ಕೆ.ಆರ್. ರವಿ, ಕೆ.ಆರ್. ಸತೀಶ್, ಶಿಲ್ಪಾ ಅರಸೀಕೆರೆ ಕಣದಲ್ಲಿ ಉಳಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net