ಕಲಸಿಂದ ಪ್ರಾಥಮಿಕ ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ

ಫೋಟೋ ಶೀರ್ಷಿಕೆ 18 ಸಿಆರ್_ಪಿ-3ಎ
ಚನ್ನರಾಯಪಟ್ಟಣ ತಾಲೂಕಿನ ಕಲಸಿಂದ ಪಿಎಸಿಸಿಎಸ್‌ಗೆ ಅವಿರೋಧವಾಗಿ ಆಯ್ಕೆಯಾದ 8 ನಿರ್ದೇಶಕರನ್ನು ಶಾಸಕ ಸಿ.ಎನ್.ಬಾಲಕೃಷ್ಣ ಅಭಿನಂದಿಸಿದರು.
Published on

ಚನ್ನರಾಯಪಟ್ಟಣ: ತಾಲೂಕಿನ ಕಲಸಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾದ ಜೆಡಿಎಸ್ ಬೆಂಬಲಿತ ಎಂಟು ನಿರ್ದೇಶಕರು ಶಾಸಕ ಸಿ.ಎನ್.ಬಾಲಕೃಷ್ಣ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕರನ್ನು ಸಂಘದ ನೂತನ ನಿರ್ದೇಶಕರಾದ ಜೆ.ಆರ್.ಉಮೇಶ್, ನಾಗೇಶ್, ಕೃಷ್ಣಮೂರ್ತಿ, ಜಯಲಕ್ಷ್ಮಮ್ಮ ತಿಮ್ಮೇಗೌಡ, ಹರೀಶ್, ಸ್ವಾಮಿ, ಮುನಿಸ್ವಾಮಿ ಬಾಲಕೃಷ್ಣ ಅವರನ್ನು ಭೇಟಿ ಮಾಡಿ ಗೆಲುವಿನ ಸಂಸತ ಹಂಚಿಕೊಂಡರ.

ಸೊಸೈಟಿ ಹಿತದೃಷ್ಟಿಯಿಂದ ಎರಡೂ ಪಕ್ಷಗಳು ಚುನಾವಣೆ ಬೇಡ ಎಂಬ ನಿಲುವು ಹೊಂದಿದರಿಂದ ಅವಿರೋಧ ಆಯ್ಕೆ ನಡೆದಿದೆ. ಕಲಸಿಂದ ಸೊಸೈಟಿ 10 ವರ್ಷಗಳಿಂದ ರೈತರ ಸೇವೆಗೆ ಮಾಡುತ್ತಿದೆ. ಸೊಸೈಟಿ ವ್ಯಾಪ್ತಿಯಲ್ಲಿ 6.5 ಕೋಟಿ ರೂ. ಸಾಲ ನೀಡಲಾಗಿದ್ದು, ನಾಲ್ಕು ಬಾರಿ ಸಾಲ ಮನ್ನಾ ಯೋಜನೆಯ ಲಾಭ ಸಿಕ್ಕಿದೆ ಎಂದು ಬಾಲಕೃಷ್ಣ ಹೇಳಿದರು.

ಸೊಸೈಟಿಯ 12 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿತ್ತು. ಈ ನಡುವೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಅವಿರೋಧ ಆಯ್ಕೆಗೆ ಅರ್ಜಿ ಸಲ್ಲಿಸುವ ವೇಳೆ ಸಹಮತ ವ್ಯಕ್ತಪಡಿಸಿದ್ದರಿಂದ ಅಮತಿಮ ಕ್ಷಣದಲ್ಲಿ ಚುನಾವಣೆ ನಡೆಯಲಿಲ್ಲ. ಒಪ್ಪಂದದಂತೆಯೇ ಕಾಂಗೆಸ್ ಬೆಂಬಲಿತರಾದ ರತ್ಮಮ್ಮ, ನಾಗಯ್ಯ, ಶಿವರಾಜ್, ಮತ್ತು ಮೋಹನ್ ಕೂಡ ಅವಿರೋಧವಾಗಿ ಆಯ್ಕೆಯಾದರು.

ಸ್ಥಳೀಯ ಮುಖಂಡರಾದ ಸಿ.ಎನ್.ಪುಟ್ಟಸ್ವಾಮಿಗೌಡ, ಬಿ.ಸಿ.ದೊರೆಸ್ವಾಮಿ, ಶಿವಸ್ವಾಮಿ, ಅಣ್ಣೇಗೌಡ, ಭೈರೇಗೌಡ, ಮಂಜು, ಜಗದೀಶ್, ಕರಿಮಂಜಣ್ಣ, ಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net