ಸವಣೂರ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ

12 SVR 1
Published on

ಸವಣೂರ: ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಧರಿಯಪ್ಪಗೌಡ ಪಾಟೀಲ, ಉಪಾಧ್ಯಕ್ಷರಾಗಿ ನಿಂಗನಗೌಡ ಪಾಟೀಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ದಿ. ಸವಣೂರು ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹೊಸನೀರಲಗಿ ಗ್ರಾಮದ ಧರಿಯಪ್ಪಗೌಡ ಪಾಟೀಲ, ಉಪಾಧ್ಯಕ್ಷ ಸ್ಥಾನಕ್ಕೆ ಕಾರಡಗಿ ಗ್ರಾಮದ ನಿಂಗನಗೌಡ ಪಾಟೀಲ ಮತ್ರ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ, ಚುನಾವಣಾಧಿಕಾರಿ ಪುಷ್ಪಾ ಕಡಿದಾಳ ಅವರು ಅವಿರೋಧ ಆಯ್ಕೆ ಘೋಷಿಸಿದರು.

ಸಂಘಕ್ಕೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ- ಉಪಾಧ್ಯಕ್ಷರು, ಸದಸ್ಯರನ್ನು ಮುಖಂಡರು ಹಾಗೂ ಹಿರಿಯರು ಸನ್ಮಾನಿಸಿದರು.

ಸಂಘದ ನೂತನ ಅಧ್ಯಕ್ಷ ಧರಿಯಪ್ಪಗೌಡ ಪಾಟೀಲ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಬದ್ಧತೆಯಿಂದ ಕೆಲಸ ಮಾಡಿದರೆ ಮಾತ್ರ ಸಂಘಗಳು ಬೆಳೆಯುತ್ತವೆ. ಹಿರಿಯ ಸಹಕಾರಿಗಳು ಕಟ್ಟಿ ಮುನ್ನಡೆಸಿದ ಪ್ರತಿಷ್ಠಿತ ಸಂಸ್ಥೆಯನ್ನು ಎಲ್ಲರ ಸಹಕಾರ, ಮಾರ್ಗದರ್ಶನದಿಂದ ಮುನ್ನಡೆಸುತ್ತೇನೆ ಎಂದರು.

ಸಂಘದ ನಿರ್ದೇಶಕ ರುದ್ರಗೌಡ ಪಾಟೀಲ, ಬಸಯ್ಯ ಮಹಾಂತಿನಮಠ, ಬಸನಗೌಡ ಪಾಟೀಲ, ಚಂದ್ರಶೇಖರ ಕಂಬಳಿ, ಉಡಚಪ್ಪ ಬಡಲಿಂಗಪ್ಪನವರ, ರಾಮಣ್ಣ ಕಳಸದ, ಲಕ್ಷ್ಮಣ ಕದಂ, ಪರಸಪ್ಪ ಗೌಳೇರ, ನಿರ್ಮಲಾ ನಿಂಗನಗೌಡ್ರ, ದ್ಯಾಮವ್ವ ಧರಿಯಪ್ಪನವರ, ವರ್ತಕ ಸುಭಾಸ ಗಡೆಪ್ಪನವರ, ಸಂಗಣ್ಣ ಏರೇಶೀಮಿ, ಸವಣೂರ ಮಂಡಲ ಬಿಜೆಪಿ ಅಧ್ಯಕ್ಷ ಗಂಗಾಧರ ಬಾಣದ, ತಾಪಂ ಮಾಜಿ ಅಧ್ಯಕ್ಷರಾದ ರಮೇಶ ಅರಗೋಳ, ರುದ್ರಗೌಡ ಪಾಟೀಲ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಬಿ.ಎಸ್. ಕೊಪ್ಪದ, ತೆಗ್ಗೀಹಳ್ಳಿ ಗ್ರಾಪಂ ಉಪಾಧ್ಯಕ್ಷ ತಿಪ್ಪನಗೌಡ ಪಾಟೀಲ, ಮಾಜಿ ಅಧ್ಯಕ್ಷ ಗಿರೀಶಗೌಡ ಪಾಟೀಲ, ನಾಗರಾಜ ವಾಲ್ಮೀಕಿ, ಹನುಮಂತಗೌಡ ಮುದಿಗೌಡ್ರ, ಶ್ರೀಕಾಂತ ಲಕ್ಷ್ಮೇಶ್ವರ, ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ ಕುರವತ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net