ಚನ್ನಹಳ್ಳಿ ಎಂಪಿಸಿಎಸ್‌ಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

CPTN 1
ಅವಿರೋಧವಾಗಿ ಆಯ್ಕೆ
Published on

ವಿಜಯವಾಣಿ ಸುದ್ದಿಜಾಲ ಚನ್ನರಾಯಪಟ್ಟಣ
ಹೋಬಳಿಯ ಚನ್ನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಮುನಿರಾಜ್, ಉಪಾಧ್ಯಕ್ಷರಾಗಿ ಆಶಾ ಅವಿರೋಧವಾಗಿ ಆಯ್ಕೆಯಾದರು.
ಡೇರಿ ಆವರಣದಲ್ಲಿ ನಿಗದಿಯಾಗಿದ್ದ ಚುನಾವಣಾ ಪ್ರಕ್ರಿಯೆಯಲ್ಲಿ ಚುನಾವಣೆ ಅಧಿಕಾರಿ ನಾಗಭೂಷಣ್ ಅವಿರೋಧ ಆಯ್ಕೆ ಎಂದು ೋಷಿಸಿದರು.
ಅಧ್ಯಕ್ಷ ಮುನಿರಾಜು ಮಾತನಾಡಿ, ಎಲ್ಲರ ಸಹಕಾರ ಪಡೆದು ಸಂಘದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಎಲ್ಲ ರೈತರಿಗೂ ಬಮುಲ್‌ನಿಂದ ಲಭ್ಯವಿರುವ ಸೌಲಭ್ಯಗಳನ್ನು ತಲುಪಿಸಲಾಗುವುದು ಎಂದರು.
ಜಿಪಂ ಮಾಜಿ ಅಧ್ಯಕ್ಷ ಬಿ. ರಾಜಣ್ಣ ಮಾತನಾಡಿ, ಸಂಘದ ಆಡಳಿತ ಮಂಡಳಿ ಹಾಲು ಸರಬರಾಜು ಮಾಡುವ ಸದಸ್ಯರ ಕಷ್ಟ ವಿಚಾರಿಸಿ, ಪರಿಹರಿಸಲು ಶ್ರಮಿಸಬೇಕು. ಗುಣಮಟ್ಟದ ಹಾಲು ಸಂಗ್ರಹಕ್ಕೆ ಆದ್ಯತೆ ನೀಡುವ ಜತೆಗೆ ಸಂಘ ಹಾಗೂ ರೈತರ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದರು.
ಗ್ರಾಪಂ ಅಧ್ಯಕ್ಷೆ ರಾಧಾಕೃಷ್ಣ, ಮಾಜಿ ಅಧ್ಯಕ್ಷೆ ಶಶಿಕಲಾ ಮುನಿರಾಜ್, ಸದಸ್ಯರಾದ ಶೋಭಾ ಶಿವಕುಮಾರ್, ದೇವರಾಜ್, ಮುಖಂಡರಾದ ನಂದೀಶ್, ಡೇರಿ ಕಾರ್ಯದರ್ಶಿ ಚಂದ್ರಶೇಖರ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net