

ಕಾಸರಗೋಡು: ಲೋಕಸಭಾ ಕ್ಷೇತ್ರದ ಐಕ್ಯರಂಗ ಅಭ್ಯರ್ಥಿ ರಾಜ್ಮೋಹನ್ ಉಣ್ಣಿತ್ತಾನ್ 490659 ಮತಗಳನ್ನು ಪಡೆದುಕೊಂಡಿದ್ದು, ಪ್ರತಿಸ್ಪರ್ಧಿ ಎಡರಂಗದ ಎಂ.ವಿ ಬಾಲಕೃಷ್ಣನ್ ಅವರನ್ನು 100649 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ಎಂ.ವಿ ಬಾಲಕೃಷ್ಣನ್(ಸಿಪಿಎಂ)ಅವರು 390010 ಮತ ಪಡೆದಿದ್ದು, ಬಿಜೆಪಿಯ ಎಂ.ಎಲ್ ಅಶ್ವಿನಿ 219558 ಮತಗಳನ್ನು ಪಡೆದುಕೊಂಡಿದ್ದಾರೆ.
ಬಹುಜನ ಸಮಾಜ ಪಕ್ಷದ ಸುಕುಮಾರಿ 1612, ಸ್ವತಂತ್ರ ಅಭ್ಯರ್ಥಿಗಳಾದ ಅನೀಶ್ ಪಯ್ಯನ್ನೂರ್-759, ರಾಜೇಶ್ವರಿ-897, ಮನೋಹರನ್ ಕೆ-804, ಬಾಲಕೃಷ್ಣನ್ ಎನ್- 628, ಎನ್.ಕೇಶವ ನಾಯಕ್-507 ಮತಗಳನ್ನು ಪಡೆದುಕೊಂಡಿದ್ದಾರೆ. 7112 ನೋಟಾ ಮತಗಳು ದಾಖಲಾಗಿದ್ದು, ಕಳೆದ ಬಾರಿಗಿಂತ ಮೂರು ಸಾವಿರ ಮತಗಳು ಹೆಚ್ಚಾಗಿವೆ.