ಲೋಕೋಪೈಲಟ್​ಗಳ ವಿಶ್ರಾಂತಿಗಾಗಿ ರನ್ನಿಂಗ್ ರೂಮ್

New Running Room New
Published on

ಹುಬ್ಬಳ್ಳಿ : ರೈಲುಗಳ ಸುರಕ್ಷಿತ ಸಂಚಾರದ ದೃಷ್ಟಿಯಿಂದ ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯ ಲೋಕೋಪೈಲಟ್​ಗಳು ಹಾಗೂ ಗಾರ್ಡ್​ಗಳಿಗೆ ಪ್ರತಿ 9 ತಾಸಿನ ಕರ್ತವ್ಯದ ನಂತರ ಕಡ್ಡಾಯವಾಗಿ ವಿಶ್ರಾಂತಿ ನೀಡಲಾಗುತ್ತಿದೆ. ಅವರ ವಿಶ್ರಾಂತಿಗಾಗಿಯೇ ವಲಯ ವ್ಯಾಪ್ತಿಯ ವಿವಿಧೆಡೆ ಅತ್ಯಾಧುನಿಕ ಸೌಲಭ್ಯಗಳುಳ್ಳ ರನ್ನಿಂಗ್ ರೂಮ್ಳನ್ನು ನಿರ್ವಿುಸಲಾಗಿದೆ.

ಇಲ್ಲಿನ ಎಸ್​ಎಸ್​ಎಸ್ ಹುಬ್ಬಳ್ಳಿ ರೈಲು ನಿಲ್ದಾಣ ಪಕ್ಕದ ರನ್ನಿಂಗ್ ರೂಮ್ಲ್ಲಿ ಈ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ವಿವರ ನೀಡಿದ ನೈಋತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ ಕನಮಡಿ, ಹುಬ್ಬಳ್ಳಿ ವಿಭಾಗ ವ್ಯಾಪ್ತಿಯಲ್ಲಿ 431 ಹಾಸಿಗೆಗಳುಳ್ಳ 8, ಬೆಂಗಳೂರು ವಿಭಾಗ ವ್ಯಾಪ್ತಿಯಲ್ಲಿ 191 ಹಾಸಿಗೆಗಳುಳ್ಳ 4 ಹಾಗೂ ಮೈಸೂರು ವಿಭಾಗದಲ್ಲಿ 276 ಹಾಸಿಗೆಗಳುಳ್ಳ 9 ರನ್ನಿಂಗ್ ರೂಮ್ಳಿವೆ. ಈ ರನ್ನಿಂಗ್ ರೂಮ್ಳಲ್ಲಿ ತ್ರಿಸ್ಟಾರ್ ಹೋಟೆಲ್ ಮಾದರಿಯ ಸೌಲಭ್ಯಗಳು ಇವೆ ಎಂದು ತಿಳಿಸಿದರು.

ಇನ್ನೂ 505 ಹಾಸಿಗೆಗಳುಳ್ಳ 14 ರನ್ನಿಂಗ್ ರೂಮ್ಳನ್ನು ನಿರ್ವಿುಸುವ ಉದ್ದೇಶ ಇದೆ. ಇಲ್ಲಿ ವಿಶ್ರಾಂತಿ ಕೊಠಡಿ, ಧ್ಯಾನ ಮಂದಿರ, ಅತಿ ಕಡಿಮೆ ಬೆಲೆಗೆ ಪೌಷ್ಠಿಕಾಂಶವುಳ್ಳ ಆಹಾರ, ಆಟವಾಡಲು ಚೆಸ್​ಬೋರ್ಡ್, ಕೇರಂ, ಫೂಟ್ ಮಸಾಜ್ ಸೌಲಭ್ಯ ಇನ್ನಿತರ ಸೌಲಭ್ಯಗಳಿವೆ ಎಂದು ಹೇಳಿದರು.

ನೈಋತ್ಯ ರೈಲ್ವೆ ವಲಯದ ವ್ಯಾಪ್ತಿಯಲ್ಲಿ 3,600 ಜನ ಲೋಕೋಪೈಲಟ್​ಗಳಿದ್ದು, ಶೇ. 50ರಷ್ಟು ಉದ್ಯೋಗಿಗಳು ವಿಶ್ರಾಂತಿಯಲ್ಲಿದ್ದರೆ, ಇನ್ನುಳಿದ ಶೇ. 50ರಷ್ಟು ಉದ್ಯೋಗಿಗಳು ಕರ್ತವ್ಯದಲ್ಲಿ ಇರುತ್ತಾರೆ ಎಂದರು.

ನೈಋತ್ಯ ರೈಲ್ವೆಯಲ್ಲಿ ನಿತ್ಯ 300 ಪ್ರಯಾಣಿಕ ಹಾಗೂ 450 ಗೂಡ್ಸ್ ರೈಲುಗಳು ಸಂಚರಿಸುತ್ತವೆ. ಸಧ್ಯದ ಪರಿಸ್ಥಿತಿಯಲ್ಲಿ ಎಲ್ಲ ಪ್ರಯಾಣಿಕ ರೈಲುಗಳಲ್ಲಿ ಭದ್ರತೆಗಾಗಿ ಆರ್​ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲು ಆಗುತ್ತಿಲ್ಲ. ಮುಂದಿನ ದಿನಗಳಲ್ಲಿ ಗುತ್ತಿಗೆ ಆಧಾರದಲ್ಲಿ ಭದ್ರತಾ ಸಿಬ್ಬಂದಿಯನ್ನು ನೇಮಿಸಿಕೊಂಡು, ಅವರನ್ನು ರೈಲು ನಿಲ್ದಾಣದ ಸುರಕ್ಷತಾ ಕಾರ್ಯಕ್ಕೆ ನಿಯೋಜಿಸಲಾಗುವುದು. ಆಗ ಆರ್​ಪಿಎಫ್ ಸಿಬ್ಬಂದಿಯನ್ನು ಹೆಚ್ಚಿನ ರೈಲುಗಳಲ್ಲಿ ಸುರಕ್ಷತೆಗಾಗಿ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net