ಅನ್‌ಲಾಕ್ ಆಗದಿದ್ದರೆ ಜನ ದಂಗೆ ಅಪಾಯ: ಉಡುಪಿ ಶಾಸಕ ರಘುಪತಿ ಭಟ್ ಹೇಳಿಕೆ

bhat new
Published on

ಉಡುಪಿ: ಜಿಲ್ಲೆಯಲ್ಲಿ ಕೋವಿಡ್-19 ಪಾಸಿಟಿವಿಟಿ ದರ ಶೇ.40 ರಿಂದ ಶೇ.5.02ಕ್ಕೆ ಇಳಿಕೆಯಾಗಿದೆ. ಲಾಕ್‌ಡೌನ್ ಮುಂದುವರಿದರೆ ಜನರಿಗೆ ಕಷ್ಟವಾಗುತ್ತದೆ. ಹೀಗಾಗಿ ಅನ್‌ಲಾಕ್ ಪ್ರಕ್ರಿಯೆ ಆರಂಭಿಸಬೇಕು. ಇಲ್ಲದಿದ್ದರೆ ಸರ್ಕಾರದ ಮೇಲೆ ಜನರು ಬೇಸರಗೊಳ್ಳುತ್ತಾರೆ. ಸಂಕಷ್ಟದಲ್ಲಿರುವ ಜನರು ದಂಗೆ ಏಳುವ ಅಪಾಯವಿದೆ ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ, ಉಸ್ತುವಾರಿ ಸಚಿವ ಮತ್ತು ಆರೋಗ್ಯ ಸಚಿವರಿಗೆ ಮನವಿ ಮಾಡಲಾಗಿದೆ. ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ಶೇ.02 ಹೆಚ್ಚು ಇರುವ ಕಾರಣಕ್ಕೆ ಲಾಕ್‌ಡೌನ್ ಮುಂದುವರಿಸುವುದು ಸರಿಯಲ್ಲ. ಜನರ ತ್ಯಾಗದಿಂದ ಈ ಸಾಧನೆ ಸಾಧ್ಯವಾಗಿದೆ. ಬಟ್ಟೆ, ಮೊಬೈಲ್, ಗ್ಯಾರೇಜ್, ಫ್ಯಾನ್ಸಿ ಮಳಿಗೆ ತೆರೆಯಲು ಬಹಳ ಬೇಡಿಕೆ ಇದೆ. ಸೋಮವಾರ ಮತ್ತೆ ಸಭೆ ನಡೆಸಿ ಉಸ್ತುವಾರಿ ಸಚಿವರಿಗೆ ವಿನಂತಿ ಮಾಡಲಾಗುವುದು ಎಂದರು.

ಸಣ್ಣ ವ್ಯಾಪಾರಸ್ಥರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೋಟೆಲ್, ಗೂಡಂಗಡಿ, ಸೆಲೂನ್ ಉದ್ಯಮಿಗಳು ಸಮಸ್ಯೆ ಯಲ್ಲಿದ್ದಾರೆ. ಪುಸ್ತಕದಂಗಡಿ, ಬ್ಯೂಟಿ ಪಾರ್ಲರ್ ತೆಗೆಯಬೇಕೆಂಬ ಒತ್ತಾಯವಿದೆ. ಧಾರ್ಮಿಕ, ಸಾಮಾಜಿಕ ಸಭೆ ಹೊರತುಪಡಿಸಿ ಇತರ ಚಟುವಟಿಕೆಗಳಿಗೆ ಅವಕಾಶ ನೀಡಬಹುದು. ಸಾಮಾಜಿಕ ಅಂತರ, ಸ್ಯಾನಿಟೈಸರ್, ಮಾಸ್ಕ್ ಬಳಕೆ ಕಡ್ಡಾಯ ಮಾಡಿ, ಅನ್‌ಲಾಕ್ ಮಾಡಬೇಕು. ಸಂಜೆಯವರೆಗೂ ವಹಿವಾಟು ನಡೆಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net