14ರಿಂದ ರಾಜ್ಯದಲ್ಲಿ ಅನ್​ಲಾಕ್​ ಫಿಕ್ಸ್​: ಬಹುಹಂತದಲ್ಲಿ ರ್ನಿಬಂಧ ತೆರವಿಗೆ ವೇದಿಕೆ ಸಜ್ಜು

lockdown bangalore 2
Published on

ಬೆಂಗಳೂರು: ಕರೊನಾ ಸೋಂಕು ಪ್ರಕರಣ ಹಾಗೂ ಪಾಸಿಟಿವಿಟಿ ದರ ಏರಿಳಿತದ ನಡುವೆಯೇ ಅನ್​ಲಾಕ್​ಗೆ ಬಿರುಸಿನ ತಾಲೀಮು ನಡೆಸಿರುವ ರಾಜ್ಯ ಸರ್ಕಾರ, ಸೋಮವಾರದಿಂದ ಹಂತಹಂತವಾಗಿ ರ್ನಿಬಂಧ ತೆರವು ಮಾಡುವುದು ಬಹುತೇಕ ಫಿಕ್ಸ್​ ಆಗಿದೆ. ಈ ಮಧ್ಯೆ ಶುಕ್ರವಾರದಿಂದ ಸಿಎಂ ಯಡಿಯೂರಪ್ಪ ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳ ಪ್ರವಾಸ ಕೈಗೊಳ್ಳುವುದರಿಂದ ಗುರುವಾರ ಅವರ ನೇತೃತೃತ್ವದಲ್ಲಿ ನಡೆಯುವ ಸಭೆ ಕುತೂಹಲ ಕೆರಳಿಸಿದೆ. ತಜ್ಞರ ಸಲಹೆಗಳು, ವಸ್ತುಸ್ಥಿತಿ ಆಧಾರದ ಮೇಲೆ ಸರ್ಕಾರ ರ್ನಿಣಯ ಕೈಗೊಳ್ಳುವುದರಿಂದ ಪರಿಷತ ಮಾರ್ಗಸೂಚಿ ಗುರುವಾರವೇ ಪ್ರಕಟವಾಗುವ ಸಾಧ್ಯತೆಗಳಿವೆ.

ಕರೊನಾ ಎರಡನೇ ಅಲೆ ಪ್ರಭಾವ ತಗ್ಗುತ್ತಿದ್ದರೂ ಕೆಲವು ಜಿಲ್ಲೆಗಳಲ್ಲಿ ಗಂಭೀರ ಪರಿಸ್ಥಿತಿಯಿದೆ. ಈ ಹಿನ್ನೆಲೆಯಲ್ಲಿ ರಾಜ್ಯವ್ಯಾಪಿ ಏಕಸ್ವರೂಪದ ಅನ್​ಲಾಕ್​ ಜಾರಿಗೊಳಿಸುವುದು ಅನುಮಾನ. ಆರ್ಥಿಕತೆಗೆ ಚೈತನ್ಯ ತುಂಬಲು ಹಾಗೂ ಜನರನ್ನು ಒತ್ತಡದಿಂದ ಹೊರತರಲು ಪೂರಕವಾದ ಪ್ರಮುಖ ಚಟುವಟಿಕೆಗಳು ಮೊದಲ ಆದ್ಯತೆ ಮೇಲೆ ಅವಕಾಶ ಗಿಟ್ಟಿಸಿಕೊಳ್ಳುವ ನಿರೀೆಯಿದೆ. ತಜ್ಞರ ಸಲಹೆ ಪ್ರಕಾರ ಹೊಸ ಪ್ರಕರಣಗಳು 5 ಸಾವಿರಕ್ಕಿಂತ ಕಡಿಮೆ ಹಾಗೂ ಪಾಸಿಟಿವಿಟಿ ದರ ಶೇ.5ಕ್ಕಿಂತಲೂ ಕಡಿಮೆಯಾಗಬೇಕು.

ಸಿಎಂ ಹಾಗೂ ಮೂವರು ಸಚಿವರೊಂದಿಗೆ ಒಂದು ಸುತ್ತಿನ ಮಾತುಕತೆಯಾಗಿದೆ. 3&5 ಹಂತಗಳಲ್ಲಿ ಅನ್​ಲಾಕ್​ ಪ್ರಕ್ರಿಯೆಗೆ ಸಿದ್ಧತೆ ನಡೆದಿದೆ. ಹೊಸ ಮಾರ್ಗಸೂಚಿ ಹೊರಡಿಸುವ ಕುರಿತೂ ಚರ್ಚಿಸಿದ್ದು, ಸಿಎಂ ಬಿಎಸ್​ವೈ ಗುರುವಾರ ಈ ಬಗ್ಗೆ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವರು. | ಆರ್​.ಅಶೋಕ್​ ಕಂದಾಯ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net