ರೈಲಿಗೆ ಸಿಲುಕಿ ಅಪರಿಚಿತೆ ಸಾವು: ಮಂಡ್ಯ ಠಾಣೆಯಲ್ಲಿ ಪ್ರಕರಣ

Crime Logo
Published on

ಮಂಡ್ಯ: ಮದ್ದೂರು-ಹನಕೆರೆ ಮಾರ್ಗದಲ್ಲಿ ಸೆ.3ರಂದು ರೈಲಿಗೆ ಸಿಲುಕಿ ಅಪರಿಚಿತೆ ಮೃತಪಟ್ಟಿದ್ದಾರೆ.

ಸುಮಾರು 55 ರಿಂದ 60 ವರ್ಷ ವಯಸ್ಸು, 5.3 ಅಡಿ ಎತ್ತರ ಹಾಗೂ ಸಾಧಾರಣ ಶರೀರ ಹೊಂದಿದ್ದಾರೆ. ಆಕೆ ಚಿನ್ನದ ಬಣ್ಣದ ಜರಿ ಇರುವ ಕೆಂಪು ಸೀರೆ ಧರಿಸಿದ್ದಾರೆ. ಬಲಗೈ ತೋಳಿನ ಮೇಲೆ ಹಳೆಯ ಗಾಯದ ಗುರುತಿದೆ. ಶವವನ್ನು ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿಡಲಾಗಿದ್ದು, ವಾರಸುದಾರರಿದ್ದರೆ ಮಂಡ್ಯ ರೈಲ್ವೆ ಪೊಲೀಸರನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net