ಅಪಘಾತದಲ್ಲಿ ಅಪರಿಚಿತ ವೃದ್ಧ ಸಾವು

22blrp2
Published on

ಬೇಲೂರು: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಬಲ್ಲೇನಹಳ್ಳಿ ಸಮೀಪ ರಸ್ತೆ ಅಪಘಾತದಲ್ಲಿ ಅಪರಿಚಿತ ವೃದ್ಧರೊಬ್ಬರು ಮೃತಪಟ್ಟಿದ್ದಾರೆ.

ಗುರುವಾರ ರಾತ್ರಿ ನಡೆದಿರುವ ಅಪಘಾತದಲ್ಲಿ ಅಂದಾಜು 75ರ ವಯೋಮಾನದ ಅಪರಿಚಿತ ವೃದ್ಧ ಮೃತಪಟ್ಟಿದ್ದು, ಅವರ ಬಗ್ಗೆ ಯಾವುದೇ ಮಾಹಿತಿ ತಿಳಿದಿಲ್ಲ. ವಾರಸುದಾರರು ಇದ್ದಲ್ಲಿ ಠಾಣೆ ಸಂಪರ್ಕಿಸುವಂತೆ ಬೇಲೂರು ಠಾಣೆ ಇನ್ಸ್‌ಪೆಕ್ಟರ್ ರವಿಕಿರಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net