

ಮಂಡ್ಯ: ಮದ್ದೂರು-ಹನಕೆರೆ ಮಾರ್ಗದ ನಡುವೆ ಜು.30ರಂದು ರೈಲಿಗೆ ಸಿಲುಕಿ ಗಾಯಗೊಂಡಿದ್ದ ಅಪರಿಚಿತ ವ್ಯಕ್ತಿ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಸುಮಾರು 60 ವರ್ಷದವನಾಗಿದ್ದು, 5.6 ಅಡಿ ಎತ್ತರವಿದ್ದಾನೆ. ಬಲಗೈ ತೋಳಿನ ಮೇಲೆ ನಾಗರಹಾವಿನ ಹಚ್ಚೆ ಗುರುತು ಇದೆ. ಮೃತದೇಹವನ್ನು ಮಿಮ್ಸ್ ಶವಾಗಾರದಲ್ಲಿಡಲಾಗಿದ್ದು, ವಾರಸುದಾರರಿದ್ದರೆ ಮಂಡ್ಯ ರೈಲ್ವೆ ಪೊಲೀಸರನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.