ರೈಲಿಗೆ ಸಿಲುಕಿ ಅಪರಿಚಿತ ಸಾವು: ಮಂಡ್ಯ ಠಾಣೆಯಲ್ಲಿ ಪ್ರಕರಣ

Crime Logo
Published on

ಮಂಡ್ಯ: ಹನಕೆರೆ-ಮಂಡ್ಯ ಮಾರ್ಗದಲ್ಲಿ ನ.23ರಂದು ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾನೆ.

ಸುಮಾರು 40 ರಿಂದ 45 ವರ್ಷದವನಾಗಿದ್ದು, 5.6 ಅಡಿ ಎತ್ತರವಿದ್ದಾನೆ. ಈತನ ಮೈ ಮೇಲೆ ತಿಳಿ ನೀಲಿ ಬಣ್ಣದ ತುಂಬು ತೋಳಿನ ಅಂಗಿ, ಕಪ್ಪು ಬಣ್ಣದ ಚುಕ್ಕಿ ಇರುವ ಲುಂಗಿ ಇದೆ. ಮೃತದೇಹವನ್ನು ಜಿಲ್ಲಾಸ್ಪತ್ರೆ ಶವಾಗಾರದಲ್ಲಿಡಲಾಗಿದ್ದು, ವಾರಸುದಾರರಿದ್ದರೆ ಮಂಡ್ಯ ರೈಲ್ವೆ ಪೊಲೀಸರನ್ನು ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net