ರೈಲಿಗೆ ಸಿಲುಕಿ ಅಪರಿಚಿತ ಸಾವು: ಬಲಗೈ ಮೇಲಿದೆ ಎಸ್‌ಎಲ್‌ವಿ ಹಸಿರಚ್ಚೆ

crime
Published on

ಮಂಡ್ಯ: ಮಂಡ್ಯ-ಹನಕೆರೆ ಮಾರ್ಗಮಧ್ಯೆ ಬುಧವಾರ ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾನೆ.

ಸುಮಾರು 50 ವರ್ಷದವನಾಗಿದ್ದು, ಸಾಧಾರಣ ಮೈಕ್ಕಟ್ಟು ಹೊಂದಿದ್ದಾರೆ. ಬಲಗೈ ಮೇಲೆ ಇಂಗ್ಲೀಷ್‌ನಲ್ಲಿ ಎಸ್‌ಎಲ್‌ವಿ ಎಂಬ ಹಸಿರು ಹಚ್ಚೆ ಇದೆ. ಜತೆಗೆ ಆತನ ಬಳಿ ಆಸ್ಪತ್ರೆಯ ಚೀಟಿಯಲ್ಲಿ ಚಂದ್ರಶೇಖರ್ ಬೆಳಗುಂಬ ತುಮಕೂರು ಜಿಲ್ಲೆ ಎಂದು ಬರೆದಿದೆ. ಮೃತನ ಮೈಮೇಲೆ ಆಕಾಶ ನೀಲಿ ಬಣ್ಣದ ತುಂಬು ತೋಳಿನ ಅಂಗಿ, ಕಪ್ಪು ಬಣ್ಣದ ಪ್ಯಾಂಟ್ ಇದೆ. ಶವವನ್ನು ಜಿಲ್ಲಾಸ್ಪತ್ರೆ ಶವಾಗಾರದಲ್ಲಿಡಲಾಗಿದೆ. ವಾರಸುದಾರರಿದ್ದರೆ ಮಂಡ್ಯ ರೈಲ್ವೆ ಪೊಲೀಸರನ್ನು ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net