ರೈಲಿಗೆ ಸಿಲುಕಿ ಅಪರಿಚಿತ ಸಾವು: ಬಲಗೈ ಮೇಲಿದೆ ಜೆಎಸ್ ಹಚ್ಚೆ

Crime Logo
Published on

ಮಂಡ್ಯ: ಮದ್ದೂರು ರೈಲ್ವೆ ನಿಲ್ದಾಣದ ಸಮೀಪ ಭಾನುವಾರ ಸಂಜೆ ಪ್ಲಾಸ್ಟಿಕ್ ಬಾಟಲಿ ಆಯುವ ವೇಳೆ ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾನೆ.

ಸುಮಾರು 40 ವರ್ಷವೆಂದು ಅಂದಾಜಿಸಲಾಗಿದೆ. ಮೃತನ ಬಲಗೈ ಮೇಲೆ ಜೆಎಸ್ ಎಂದು ಹಸಿರು ಹಚ್ಚೆ ಇದೆ. ಈತನ ಮೈಮೇಲೆ ನೀಲಿ, ಪರ್ಪಲ್ ಬಣ್ಣದ ಗೆರೆಯುಳ್ಳ ತುಂಬುತೋಳಿನ ಅಂಗಿ, ನೀಲಿ ಬಣ್ಣದ ಪ್ಯಾಂಟ್ ಇದೆ. ಮೃತದೇಹವನ್ನು ಜಿಲ್ಲಾಸ್ಪತ್ರೆ ಶವಾಗಾರದಲ್ಲಿಡಲಾಗಿದ್ದು, ವಾರಸುದಾರರಿದ್ದರೆ ಮಂಡ್ಯ ರೈಲ್ವೆ ಪೊಲೀಸರನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net