ಪಾಂಡವಪುರ-ಶ್ರೀರಂಗಪಟ್ಟಣ ಮಾರ್ಗಮಧ್ಯೆ ರೈಲಿಗೆ ಸಿಲುಕಿ ಅಪರಿಚಿತ ಸಾವು

Crime Logo
Published on

ಮಂಡ್ಯ: ಶ್ರೀರಂಗಪಟ್ಟಣ ಮತ್ತು ಪಾಂಡವಪುರ ಮಾರ್ಗಮಧ್ಯೆ ಜು.21ರಂದು ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾನೆ.

ಸುಮಾರು 55 ರಿಂದ 60 ವರ್ಷದವನಾಗಿದ್ದು, 5.5 ಅಡಿ ಎತ್ತರವಿದ್ದಾನೆ. ಬಲಗೈನ ಮುಂಗೈ ಮೇಲೆ ಹಳೆ ಗಾಯದ ಗುರುತಿನ ಜತೆಗೆ ಗ್ಯಾಂಗ್ರೀನ್ ಆಗಿದೆ. ಅಂತೆಯೇ ಬಲಗಾಲಿನ ಹೆಬ್ಬೆರೆಳಿನ ಮೇಲೆ ಗ್ಯಾಂಗ್ರೀನ್ ಇದೆ. ಮೃತದೇಹವನ್ನು ಜಿಲ್ಲಾಸ್ಪತ್ರೆ ಶವಾಗಾರದಲ್ಲಿಡಲಾಗಿದ್ದು, ವಾರಸುದಾರರಿದ್ದರೆ ರೈಲ್ವೆ ಪೊಲೀಸರನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net