ಅಪರಿಚಿತ ಶವಕ್ಕೆ ಪೊಲೀಸರಿಂದಲೇ ಮುಕ್ತಿ!

police 1
ಅನಾಥ ಶವಕ್ಕೆ ಅಂತ್ಯ ಸಂಸ್ಕಾರ ನೆರವೇರಿಸಿದ ಪೊಲೀಸರು
Published on

ಶಿವಮೊಗ್ಗ: ನಗರದ ಹೊಳೆ ಬಸ್ ನಿಲ್ದಾಣದ ಸಮೀಪ ಅ.10ರಂದು ಪತ್ತೆಯಾಗಿದ್ದ ಅಪರಿಚಿತ ವ್ಯಕ್ತಿಯ ಶವಕ್ಕೆ ಕೋಟೆ ಠಾಣೆ ಪೊಲೀಸರು ಮುಕ್ತಿ ನೀಡಿದ್ದಾರೆ. ಪೊಲೀಸ್ ಸಿಬ್ಬಂದಿಯೇ ಮುಂದೆ ನಿಂತು ಬುಧವಾರ ಮಂಡ್ಲಿ ಸ್ಮಶಾನದಲ್ಲಿ ಅಪರಿಚಿತ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಿದರು.

ಹೊಳೆ ಬಸ್ ನಿಲ್ದಾಣದ ಸಮೀಪ ಫುಟ್‌ಪಾತ್ ಮೇಲೆ ಅ.12ರಂದು ಸುಮಾರು 50 ವರ್ಷದ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿತ್ತು. ಈ ಅಪರಿಚಿತ ವ್ಯಕ್ತಿಯ ಕುರುಹುಗಳನ್ನು ಪೊಲೀಸರು ವಿವಿಧ ಮಾಧ್ಯಮಗಳ ಮೂಲಕ ಜನರಿಗೆ ತಿಳಿಸುವ ಪ್ರಯತ್ನ ಮಾಡಿದ್ದರು. ಈ ವ್ಯಕ್ತಿ ಅನಾರೋಗ್ಯದಿಂದಲೋ ಅಥವಾ ಸೂಕ್ತ ಆರೈಕೆ ದೊರೆಯದ ಕಾರಣ ಅಸ್ವಾಭಾವಿಕವಾಗಿ ಮೃತಪಟ್ಟಿರಬಹುದೆಂದು ಪ್ರಕರಣ ದಾಖಲಿಸಲಾಗಿತ್ತು.
13 ದಿನ ಶವವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರದ ಶೀತಲೀಕರಣ ವ್ಯವಸ್ಥೆಯಲ್ಲಿ ಇರಿಸಲಾಗಿತ್ತು. ಈ ಅವಧಿಯಲ್ಲಿ ಮೃತ ವ್ಯಕ್ತಿಯ ಪರಿಚಯಸ್ಥರು, ಕುಟುಂಬದವರು ಯಾರೂ ಬಾರದ ಕಾರಣ ಅನಾಥ ಶವವೆಂದು ಪರಿಗಣಿಸಿ ಪೊಲೀಸ್ ಸಿಬ್ಬಂದಿ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net