ಎಟಿಎಂ ಕಾರ್ಡ್‌ನಿಂದ 1.64 ಲಕ್ಷ ರೂ. ಎಗರಿಸಿದ ಭೂಪ

crime
Published on

ಹುಬ್ಬಳ್ಳಿ: ಎಟಿಎಂನಲ್ಲಿ ಹಣ ತೆಗೆಯಲು ಹೋದ ವ್ಯಕ್ತಿಯಿಂದ ಕಾರ್ಡ್ ಪಡೆದ ಆಗಂತುಕರು, 1.64 ಲಕ್ಷ ರೂ. ಡ್ರಾ ಮಾಡಿಕೊಂಡು ಹೋಗಿರುವುದರ ಕುರಿತು ಉಪನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ನಗರದ ಸಿದ್ದರಾಮಪ್ಪ ಅಂಗಡಿ ವಂಚನೆಗೆ ಒಳಗಾದವರು.

ಉಪನಗರ ಪೊಲೀಸ್ ಠಾಣೆ ಎದುರಿನ ಬ್ಯಾಂಕ್‌ವೊಂದರ ಎಟಿಎಂನಲ್ಲಿ ಹಣ ತೆಗೆಯಲು ಹೋದಾಗ ಎರಡ್ಮೂರು ಬಾರಿ ಪ್ರಯತ್ನಿಸಿದರೂ ಹಣ ಬಂದಿಲ್ಲ. ಈ ವೇಳೆ ಬಾಜು ನಿಂತಿದ್ದ ಅಪರಿಚಿತ ವ್ಯಕ್ತಿಯೊಬ್ಬರು ನಾನು ಪ್ರಯತ್ನ ಮಾಡುತ್ತೇನೆ ಎಂದು ಹೇಳಿ, ಎಟಿಎಂ ಕಾರ್ಡ್ ಪಡೆದು ತನ್ನ ಕೈಯಲ್ಲಿದ್ದ ಬೇರೆ ಎಟಿಎಂ ಕಾರ್ಡ್ ಹಾಕಿ, ಸರ್ವರ್ ಇಲ್ಲ ಎಂದು ಹೇಳಿದ್ದಾನೆ. ನಂತರ ಫಾಸ್‌ವರ್ಡ್ ತಿಳಿದುಕೊಂಡು ನನ್ನ ಕಾರ್ಡ್‌ನಿಂದ 1,64,200 ರೂ. ಡ್ರಾ ಮಾಡಿಕೊಂಡು ಮೋಸ ಮಾಡಿದ್ದಾನೆ ಎಂದು ಸಿದ್ದರಾಮಪ್ಪ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net