ಉಣಕಲ್ಲ ಪ್ರಾ.ಕೃ.ಪ.ಸ. ಸಂಘದ ಚುನಾವಣೆ, ಅಧ್ಯಕ್ಷರಾಗಿ ಸೂರ್ಯವಂಶಿ ಮತ್ತೊಮ್ಮೆ ಆಯ್ಕೆ

IMG_20240911_111733_196-1.jpg
Published on

ಹುಬ್ಬಳ್ಳಿ: ಇಲ್ಲಿಯ ಉಣಕಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಗುರುರಾಜ ಚಂದ್ರಶೇಖರ ಸೂರ್ಯವಂಶಿ ಅವರು ಅವಿರೋಧವಾಗಿ ಮತ್ತೊಮ್ಮೆ ಆಯ್ಕೆಯಾದರು.

ಸಂಘದಲ್ಲಿ ಸೋಮವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಎರಡನೇ ಬಾರಿ ಇವರು ಆಯ್ಕೆಯಾದರು. ಉಪಾಧ್ಯಕ್ಷರಾಗಿ ನಾಗರಾಜ ಸಿದ್ದಪ್ಪ ನವಲಗುಂದ ಆಯ್ಕೆಯಾದರು.

ಆಡಳಿತ ಮಂಡಳಿ ಸದಸ್ಯರಾದ ರವಿಸಿಂಗ್ ಹಜೇರಿ, ಶೇಖಪ್ಪ ಮೆಣಸಿನಕಾಯಿ, ಶಿವಾಜಿ ಕನ್ನಿಕೊಪ್ಪ, ಯಲ್ಲಪ್ಪ ಕಡಪಟ್ಟಿ, ಸುರೇಶ ಬಾಗಮ್ಮನವರ, ಗುರುನಗೌಡ ಕೆಂಚನಗೌಡ್ರ, ರಾಯನಗೌಡ ಶೆಟ್ಟಿನಗೌಡ್ರ, ನಿಂಗವ್ವ ಹಿರೇಮಠ ಇದ್ದರು.

ಗ್ರಾಮಸ್ಥರಾದ ಶಿವು ಪಾಟೀಲ, ರಮೇಶ ಕಾಂಬಳೆ, ಸಿದ್ದು ಮಾಯಣ್ಣವರ, ಪರಪ್ಪ ಮೆಣಸಿನಕಾಯಿ, ಮಾದೇವಪ್ಪ ಮೆಣಸಿನಕಾಯಿ, ಹನುಮಂತಪ್ಪ ಸೂರ್ಯವಂಶಿ, ಮಡವಾಳಿ ಅಂಚಟಗೇರಿ, ಅಶೋಕ ಚಿಲ್ಲಣ್ಣವರ, ಇತರರು ಪದಾಧಿಕಾರಿಗಳಿಗೆ ಅಭಿನಂದಿಸಿದ್ದಾರೆ.

ಪಿ. ಮಧುಸೂದನ ಅವರು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net