

ಮೈಸೂರು: ಚೆನ್ನೈ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ 2022-23ನೇ ಸಾಲಿನ ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಟ್ಟದ ಪುರುಷರ ವಾಲಿಬಾಲ್ ಪಂದ್ಯಾವಳಿಗೆ ಮೈಸೂರು ವಿವಿ ತಂಡ ಆಯ್ಕೆ ಮಾಡಲಾಗಿದೆ.
ತಂಡದ ಸದಸ್ಯರು ತರಬೇತುದಾರ ಎಸ್.ರಮೇಶ್, ತಂಡದ ವ್ಯವಸ್ಥಾಪಕ ಎಲ್.ಲೋಹಿತ್ ಜತೆ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದಾರೆ ಎಂದು ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ ತಿಳಿಸಿದ್ದಾರೆ.