ರಂಗಭೂಮಿ ಚಲಿಸುವ ವಿಶ್ವ ವಿದ್ಯಾಲಯ

13 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ರಂಗಭೂಮಿ ಚಲಿಸುವ ವಿಶ್ವ ವಿದ್ಯಾಲಯವಿದ್ದಂತೆ. ನಾಟಕಕ್ಕೆ ಪ್ರೇಕರೇ ಜೀವಾಳ ಎಂದು ವಿಶ್ರಾಂತ ಪ್ರಾಚಾರ್ಯ ಪ್ರೊ. ಬಿ.ಆರ್​. ಪೊಲೀಸಪಾಟೀಲ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂವು ಪ್ರೊ. ಎ. ಮುರಿಗೆಪ್ಪ ದತ್ತಿ ನಿಮಿತ್ತ ಭಾನುವಾರ ಆಯೋಜಿಸಿದ್ದ ಉಪನ್ಯಾಸಕ ಕಾರ್ಯಕ್ರಮದಲ್ಲಿ ಕನ್ನಡ ರಂಗಭೂಮಿಯ ತುಡಿತ ಹಾಗೂ ತಲ್ಲಣಗಳು ವಿಷಯ ಕುರಿತು ಅವರು ಮಾತನಾಡಿದರು.
ರಂಗಭೂಮಿ ಕಲಾವಿದರಿಗೆ ಸಚ್ಚಾರಿತ್ರ್ಯ ಹಾಗೂ ತದಾತ್ಮತೆ ಮುಖ್ಯ. ಆರಂಭದಲ್ಲಿ ಜಾನಪದ ರಂಗಭೂಮಿ ದೊಡ್ಡಾಟ, ಸಣ್ಣಾಟ, ಶ್ರೀ ಕೃಷ್ಣ ಪಾರಿಜಾತ, ಗೊಂಬೆಯಾಟದಂತಹ ಆಟಗಳ ಮೂಲಕ ಹುಟ್ಟಿಕೊಂಡಿತು. ಒಂದು ಕಾಲದಲ್ಲಿ ರಂಗಭೂಮಿ ಹವ್ಯಾಸದಿಂದ ಮಕ್ಕಳು ಹಾಳಾಗುತ್ತಾರೆ ಎಂಬ ತಲ್ಲಣಗಳಿದ್ದವು. ಅದೇ ರಂಗಭೂಮಿಯಿಂದ ಏಣಗಿ ಬಾಳಪ್ಪನವರಂತವರು ಹೆಚ್ಚು ಯಶಸ್ಸು ಗಳಿಸಿದ್ದಾರೆ ಎಂದರು.
ನಾಟಕಗಳು ಜನಶಿಣ ಹಾಗೂ ಜನ ಕಲ್ಯಾಣಕ್ಕಾಗಿ ಹುಟ್ಟಿ ಬಂದಿವೆ. ರಂಗಭೂಮಿಯಿಂದ ಪರಸ್ಪರರಲ್ಲಿ ಆತ್ಮೀಯತೆ ಹುಟ್ಟುವುದು. ಭರತ ಮುನಿಯ ನಾಟ್ಯ ಶಾಸ್ತ್ರದಲ್ಲಿ ಕುಣಿತವೇ ಎಲ್ಲಾ ಕಲೆಗೂ ಮೂಲ ಎಂದು ಹೇಳಲಾಗಿದೆ. ನವರಸಗಳಿಂದ ತುಂಬಿದ ನಾಟಕಗಳು ಮಾತ್ರ ಹೆಚ್ಚು ಪ್ರೇಕರನ್ನು ಆಕಷಿರ್ಸಬಲ್ಲವು. ಮಹಾನಗರಗಳಲ್ಲಿ ನಾಟಕ ಪ್ರದರ್ಶನಗಳು ಕಡಿಮೆಯಾಗಿದ್ದು ವಿಷಾದನೀಯ. ಸರ್ಕಾರ ಹಾಗೂ ನಾಟಕ ಅಕಾಡೆಮಿಗಳು ಪ್ರೋತ್ಸಾಹ ನೀಡಿದಲ್ಲಿ ಮತ್ತೆ ರಂಗಭೂಮಿಗೆ ಹಿಂದಿನ ವೈಭವ ಮರುಕಳಿಸಬಹುದು ಎಂದರು.
ಪ್ರೊ. ಎ. ಮುರಿಗೆಪ್ಪ ರಂಗಭೂಮಿಯ ತುಡಿತ&ತಲ್ಲಣಗಳ ಕುರಿತು ಮಾತನಾಡಿದರು. ಜೀವಿಕಲಾ ಬಳಗದ ಅಧ್ಯ ಗದಿಗೆಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.
ಲೀಲಾ ಮುರಿಗೆಪ್ಪ, ಶಿವಾನಂದ ಭಾವಿಕಟ್ಟಿ, ಡಾ. ಬಾಳಪ್ಪ ಚಿನಗುಡಿ, ನಿಂಗಣ್ಣ ಕುಂಟಿ, ಪಾರ್ವತಿ ಹಾಲಭಾವಿ, ಸುರೇಶ ಹಾಲಭಾವಿ, ಸಿ.ಎಸ್​. ಪಾಟೀಲಕುಲಕಣಿರ್, ಸುಜಾತ ಹಡಗಲಿ, ಡಾ. ರಾಮು ಮೂಲಗಿ, ಶಂಕರಲಿಂಗ ಶಿವಳ್ಳಿ, ಶಿವಾನಂದ ಹೂಗಾರ, ಎಂ.ಎಸ್​. ನರೇಗಲ್​, ಇತರರು ಇದ್ದರು.
ಡಾ. ಜಿನದತ್ತ ಹಡಗಲಿ ಸ್ವಾಗತಿಸಿದರು. ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ಡಾ. ಧನವಂತ ಹಾಜವಗೋಳ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net