

ಹೊಸಪೇಟೆ: ಯಾವುದೇ ಸಂಸ್ಥೆ ಹಾಗೂ ಇಲಾಖೆಯನ್ನು ಸದೃಢವಾಗಿ ಮುನ್ನಡೆಸಬೇಕಾದರೆ ಸಿಬ್ಬಂದಿ ಪಾತ್ರ ಬಹಳ ಮುಖ್ಯ. ವೃತ್ತಿ ಜೀವನದಲ್ಲಿ ಅನೇಕ ವರ್ಷ ಸೇವೆ ಸಲ್ಲಿಸಿ ವಿವಿ ಅಭಿವೃದ್ಧಿಗೆ ಹಲವರು ಶ್ರಮಿಸಿದ್ದಾರೆ ಎಂದು ಕನ್ನಡ ವಿವಿ ಕುಲಸಚಿವ ಡಾ.ವಿಜಯ್ ಪೂಣಚ್ಚ ತಂಬಂಡ ಹೇಳಿದರು.
ಕನ್ನಡ ವಿವಿಯ ಭುವನ ವಿಜಯ ಸಭಾಂಗಣದಲ್ಲಿ ಶುಕ್ರವಾರ ಸೇವೆಯಿಂದ ನಿವೃತ್ತರಾದ ಹಿರಿಯ ಪ್ರಾಧ್ಯಾಪಕ ಡಾ.ಮಂಜುನಾಥ ಬೇವಿನಕಟ್ಟಿ, ಇಂಜಿನಿಯರ್ ಜೆ.ಎಸ್.ನಂಜಯ್ಯನವರ್, ಅಧೀಕ್ಷಕ ಜೆ.ಬಸವನಗೌಡ, ಹಿರಿಯ ಸಹಾಯಕ ಸೋಮಣ್ಣ ಸೂಡಿ ಹಾಗೂ ವಾಹನ ಚಾಲಕ ರೆಹಮತ್ ವುಲ್ಲಾ ಅವರಿಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಐವರು ನಿಷ್ಠೆ ಹಾಗೂ ಪ್ರೀತಿಯಿಂದ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ್ದಾರೆ. ಅಚ್ಚುಕಟ್ಟಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ ಎಂದರು.
ಉಪಕುಲಸಚಿವ ಡಾ.ಎ.ವೆಂಕಟೇಶ್, ಸಹಾಯಕ ಕುಲಸಚಿವ ಗುರುಬಸಪ್ಪ, ಪ್ರಾಧ್ಯಾಪಕರಾದ ಜ್ಯೋತಿ, ಡಾ.ವೀರೇಶ ಬಡಿಗೇರ, ಡಾ.ಮೋಹನ್ ಕೃಷ್ಣ ರೈ, ಡಾ.ಎನ್.ಚಿನ್ನಸ್ವಾಮಿ ಸೋಸಲೆ, ಡಾ.ಡಿ.ಮೀನಾಕ್ಷಿ ಇತರರಿದ್ದರು.