ವಿಶ್ವವಿದ್ಯಾಲಯಗಳು ಪರಿವರ್ತನೆ ಆಗಲಿ

snd may mela
ಸಿಂಧನೂರಿನಲ್ಲಿ ಚಿತ್ರಕಲಾ ಶಿಬಿರಕ್ಕೆ ಹಿರಿಯ ಕಲಾವಿದ ಕೆ.ಕೆ.ಮಕಾಳೆ ಚಾಲನೆ ನೀಡಿದರು. ಪ್ರಮುಖರಾದ ಜಾಜಿ ದೇವೇಂದ್ರಪ್ಪ, ಎಫ್.ವಿ.ಚಿಕ್ಕಮಠ, ಬಿ.ಮಾರುತಿ, ರಮೇಶ ಸಜ್ಜನ, ಕರೇಗೌಡ ಕುರುಕುಂದಿ ಇತರರಿದ್ದರು.
Published on

ಸಿಂಧನೂರು: ಜ್ಞಾನ ಕೇಂದ್ರವಾಗಬೇಕಿದ್ದ ವಿವಿಗಳು ಈಗ ಜಾತಿಯ ಕೂಪಗಳಾಗಿವೆ. ಎಸ್ಸಿ-ಎಸ್ಟಿ ಹಾಸ್ಟೆಲ್ ವಿದ್ಯಾರ್ಥಿಗಳ ಕೈಗೆ ವಿವಿಧ ಬಾವುಟ ಕೊಟ್ಟು ಜಾತಿ, ಧರ್ಮ, ದೇವರ ಹೆಸರಿನಲ್ಲಿ ಕಚ್ಚಾಡುವ ವ್ಯವಸ್ಥೆ ನಿರ್ಮಿಸಿದ್ದು, ಮೊದಲು ವಿವಿಗಳು ಪರಿವರ್ತನೆ ಆಗಬೇಕಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಜಾಜಿ ದೇವೇಂದ್ರಪ್ಪ ಹೇಳಿದರು.

ಹನ್ನೊಂದನೇ ಮೇ ಸಾಹಿತ್ಯ ಮೇಳ ನಿಮಿತ್ತ ನಗರದ ಬಸವ ಪ್ರಸಾದ ನಿಲಯದಲ್ಲಿ ಗುರುವಾರ ಲಡಾಯಿ ಪ್ರಕಾಶನ ಗದಗ, ಚಿತ್ತಾರ ಕಲಾ ಬಳಗ ಧಾರವಾಡ, ಕವಿ ಪ್ರಕಾಶನ ಕವಲಕ್ಕಿ ಹಾಗೂ ಮೇ ಸಾಹಿತ್ಯ ಮೇಳ ಬಳಗ ಹಮ್ಮಿಕೊಂಡಿದ್ದ ಚಿತ್ರಕಲಾ ಶಿಬಿರದಲ್ಲಿ ಮಾತನಾಡಿದರು. ಅಸಮಾನತೆ ಎಂಬುದು ಎಲ್ಲ ನೆಲೆಯಲ್ಲೂ ವ್ಯಾಪಿಸಿ ದೊಡ್ಡ ಪೆಡಂಭೂತವಾಗಿ ಮಾರ್ಪಟ್ಟಿದೆ. ಇದನ್ನು ಬೇರು ಸಮೇತ ಕಿತ್ತೆಸೆಯಬೇಕಾದ ಪ್ರಭುತ್ವಗಳೇ ತಮ್ಮ ಸ್ವಾರ್ಥಕ್ಕಾಗಿ ಪೋಷಿಸುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದರು.

ಹಿರಿಯ ಕಲಾವಿದ ಕೆ.ಕೆ.ಮಕಾಳೆ ಮಾತನಾಡಿ, ಒಂದು ಚಿತ್ರ ನೂರು ಮಾತು, ಧ್ವನಿಗಳಿಗೆ ಸಮ. ಜಗತ್ತಿನ ವಿದ್ಯಮಾನಗಳಿಗೆ ಅನುಗುಣವಾಗಿ ಕಲಾವಿದರು ಚಿತ್ರಗಳನ್ನು ಬಿಡಿಸಬೇಕು. ಆಯ್ಕೆಗಳನ್ನು ಬದಲಿಸಿಕೊಳ್ಳಬೇಕು ಎಂದರು. ಸಾಹಿತಿ ಅಲ್ಲಾ ಗಿರಿರಾಜ ಕನಕಗಿರಿ ಮಾತನಾಡಿದರು. ಧಾರವಾಡದ ಎಫ್.ವಿ.ಚಿಕ್ಕಮಠ, ಬಿ.ಮಾರುತಿ, ಶಿಬಿರದ ಸಹ ನಿರ್ದೇಶಕ ರಮೇಶ ಸಜ್ಜನ, ಬಸವಕೇಂದ್ರದ ತಾಲೂಕು ಅಧ್ಯಕ್ಷ ಕರೇಗೌಡ ಕುರುಕುಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net