ಬಿಜೆಪಿಯಿಂದ ಐಕ್ಯತಾ ಓಟ

New BJP Runn New
Published on

ಹುಬ್ಬಳ್ಳಿ : ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಯಂತಿ ಅಂಗವಾಗಿ ಬಿಜೆಪಿ ವತಿಯಿಂದ ನಗರದಲ್ಲಿ ಬುಧವಾರದಂದು ಐಕ್ಯತಾ ಓಟ ಆಯೋಜಿಸಲಾಗಿತ್ತು.

ಇಲ್ಲಿನ ಕೆಎಂಸಿಆರ್​ಐ ಮುಂಭಾಗದ ಮಹಾತ್ಮಗಾಂಧೀಜಿ ಪ್ರತಿಮೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಮಾಲಾರ್ಪಣೆ ಮಾಡುವ ಮೂಲಕ ಓಟಕ್ಕೆ ಚಾಲನೆ ನೀಡಿದರು. ಅಲ್ಲಿಂದ ಆರಂಭವಾದ ಐಕ್ಯತಾ ಓಟವು ಕಿತ್ತೂರು ಚನ್ನಮ್ಮ ವೃತ್ತಕ್ಕೆ ತಲುಪಿ, ಸಮಾರೋಪಗೊಂಡಿತು.ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ದೇಶದ ಸಮಗ್ರತೆಗೆ ಸರ್ದಾರ್ ವಲ್ಲಭಭಾಯಿ ಪಟೇಲರ ಕೊಡುಗೆ ಅಪಾರವಾಗಿದೆ ಎಂದರು.

ಸರ್ದಾರ್ ವಲ್ಲಭಭಾಯಿ ಪಟೇಲ ಅವರ ಧೈರ್ಯ, ಸಾಹಸ, ಪರಿಶ್ರಮ ಮತ್ತು ಕಠಿಣ ನಿರ್ಧಾರಗಳಿಂದಾಗಿ ಭಾರತ ಸುಭದ್ರವಾಗಿದೆ ಎಂದು ಹೇಳಿದರು.

ಗುಜರಾತನ ಕವಾಡಿಯಾದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ ಅವರ ಜಗತ್ತಿನ ಎತ್ತರದ ಪ್ರತಿಮೆ, ಸ್ಥಾಪಿಸಿ ಗೌರವ ನೀಡುವ ಕಾರ್ಯವನ್ನು ಎನ್​ಡಿಎ ಸರ್ಕಾರ ಮಾಡಿದೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸ್ವಾತಂತ್ರ್ಯ ಹೋರಾಟಗಾರರಿಗೆ, ರಾಷ್ಟ್ರನಾಯಕರಿಗೆ ಯಾವ ರೀತಿ ಗೌರವ ನೀಡಬೇಕು ಎಂಬುವುದು ತೋರಿಸಿದ್ದೇವೆ ಎಂದು ತಿಳಿಸಿದರು.

ಪಟೇಲರೊಂದಿಗೆ ಮಹಾತ್ಮ ಗಾಂಧಿ, ಭಗತ್​ಸಿಂಗ್, ರಾಜಗುರು, ಚಂದ್ರಶೇಖರ ಆಜಾದ್, ಸುಭಾಷಚಂದ್ರ ಬೋಸ್, ಲಾಲ್​ಬಹದ್ದೂರ್ ಶಾಸ್ತ್ರಿ ಸೇರಿಂತೆ ಹಲವರ ಕೊಡುಗೆ ಸ್ಮರಿಸಬೇಕು ಎಂದು ಹೇಳಿದರು.

ಶಾಸಕ ಮಹೇಶ ಟೆಂಗಿನಕಾಯಿ, ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ದತ್ತಮೂರ್ತಿ ಕುಲಕರ್ಣಿ, ವಿಜಯಾನಂದ ಶೆಟ್ಟಿ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಣ್ಣ ಕೊರವಿ, ಪಾಲಿಕೆ ಮಾಜಿ ಮೇಯರ್ ವೀಣಾ ಭರದ್ವಾಡ, ವೀರಣ್ಣ ಸವಡಿ, ಸದಸ್ಯರಾದ ಸಂತೋಷ ಚವ್ಹಾಣ, ರೂಪಾ ಶೆಟ್ಟಿ, ಮುಖಂಡರಾದ ಡಾ. ಕ್ರಾಂತಿಕಿರಣ, ರವಿ ನಾಯಕ, ಮಹೇಂದ್ರ ಕೌತಾಳ, ಮಲ್ಲಿಕಾರ್ಜುನ ಹೊರಕೇರಿ, ಪ್ರಭು ನವಲಗುಂದಮಠ, ವಿನಾಯಕ ಲದ್ವಾ ಹಾಗೂ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net