

ವಿಜಯವಾಣಿ ಸುದ್ದಿಜಾಲ ಧಾರವಾಡ
ದೇಶದ ಸಂತರು, ಆಚಾರ್ಯರು, ಶರಣರು, ದಾಸರು ಮತ್ತು ಸೂಫಿ ಸಂತರ ಸಕಾರಾತ್ಮಕ ಭಕ್ತಿ ಆಂದೋಲನದಿಂದ ಭಾರತ ಏಕತೆ ಸಾಧ್ಯವಾಗಿದೆ ಎಂದು ಕವಿವಿ ಗಾಂಧಿ ಅಧ್ಯಯನ ವಿಭಾಗದ ಪ್ರೊ. ಶಿವಾನಂದ ಶೆಟ್ಟರ ಹೇಳಿದರು.
ನಗರದ ನಿಡವಣಿ ಬಡಾವಣೆಯ ಸೌಹಾರ್ದ ಸಮುದಾಯ ಭವನದಲ್ಲಿ ಬಸವ ಶಾಂತಿ ಮಿಶನ್ ಟ್ರಸ್ಟ್ ವತಿಯಿಂದ ತ್ರಿಭಾಷಾ ಸಾಹಿತಿ ಡಾ. ರೇಖಾ ಕೊಟೂರ ಸ್ಮರಣಾರ್ಥ ಶನಿವಾರ ಏರ್ಪಡಿಸಿದ್ದ ನೆನಪಿನ ಅಂಗಳದಲ್ಲಿ ಅವರು ಮಾತನಾಡಿದರು.
ತ್ರಿಭಾಷೆಯಲ್ಲಿ ತಮ್ಮ ಲೇಖನಗಳಿಂದ ಮತ್ತು ರಾಷ್ಟ್ರ ಮಟ್ಟದ ವಿಚಾರ ಗೋಷ್ಠಿ, ಶೈಕ್ಷಣಿಕ ಸಮ್ಮೇಳನಗಳಲ್ಲಿ ರೇಖಾ ಕೊಟೂರ ಕೊಡುಗೆ ಅಪಾರ ಎಂದರು.
ಅಧ್ಯಕ್ಷತಡ ವಹಿಸಿದ್ದ ಡಾ. ಅಕ್ಕಮಹಾದೇವಿ ಸಂಕನಗೌಡರ ಮಾತನಾಡಿ, ಹಿಂದಿ, ಕನ್ನಡ ಮತ್ತು ಮರಾಠಿ ಭಾಷೆಗಳ ಮೇಲೆ ಪ್ರಭುತ್ವ ಹೊಂದಿದ್ದ ಡಾ. ರೇಖಾ ಕೊಟೂರ ಅಕಾಲಿಕ ಆಗಲಿಕೆಯಿಂದ ಶಿಕ್ಷಣ ಕ್ಷೇತ್ರಕ್ಕೆ ತುಂಬಲಾರದ ಹಾನಿಯಾಗಿದೆ ಎಂದರು.
ಬಸವ ಶಾಂತಿ ಮಿಶನ್ ಟ್ರಸ್ಟ್ ಅಧ್ಯಕ್ಷ ಮಹಾದೇವ ಹೊರಟ್ಟಿ, ನಿವೃತ್ತ ಇಂಜಿನಿಯರ್ ಮಲ್ಲಿಕಾರ್ಜುನ ಕೊಟೂರ, ಇತರರು ಇದ್ದರು. ಡಾ. ಶ್ರೀಧರ ಕುಲಕರ್ಣಿ, ಡಾ. ಶಾರದಾ ಭಟ್ಟ, ಡಾ. ಅರ್ಜುನ ವಠಾರ, ಅಂಜಲಿನಾ ಗ್ರೆಗರಿ, ಶೃತಿ ಕುಲಕರ್ಣಿ, ಪ್ರೇಮಕ್ಕ ಹೊರಟ್ಟಿ, ಪ್ರೇಮಕ್ಕ ಹಲಕಿ ಭಕ್ತಿ ಸಂಗೀತ ಪ್ರಸ್ತುತಪಡಿಸಿದರು.