

ಗೋಕಾಕ: ನಗರ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶ್ರದ್ಧಾ, ಭಕ್ತಿಯಿಂದ ಸಂಭ್ರಮದ ಮೊಹರಂ ಭಾನುವಾರ ಆಚರಿಸಲಾಯಿತು. ಮೊಹರಂ ಕೊನೆಯ ದಿನದ ಅಂಗವಾಗಿ ಸಂಜೆ ವಿವಿಧೆಡೆ ಪ್ರತಿಷ್ಠಾಪಿಸಲಾಗಿದ್ದ ಪಂರ ಹಾಗೂ ಡೋಲಿಗಳನ್ನು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹಳೇ ದನಗಳ ಪೇಟೆಯಲ್ಲಿ ಮುಲಾಕಾತ್ ಮಾಡಲಾಯಿತು. ಪಂರಗಳ ಸಂಗಮವಾಗುತ್ತಿದ್ದಂತೆ ನೆರೆದಿದ್ದ ಭಕ್ತರು ಹಸೇನ, ಹುಸೇನ್ ಕೀ ದೋಸ್ತರ್ ಹೊದ್ದೀನ್ ಎಂದು ಜಯೂಷ ಕೂಗಿದರು. ಬಳಿಕ ಅಲಾಯಿ ದೇವರನ್ನು ವಿಸರ್ಜಿಸಲಾಯಿತು. ಮುಲಾಕಾತ್ ನೋಡಲು ಹಿಂದು&ಮುಸ್ಲಿಂ ಸಮುದಾಯದವರು ಸೇರಿ ಭಕ್ತಿ, ಭಾವ ಮೆರೆದರು.