ಏಕತೆಯೇ ಸರ್ವ ಜನಾಂಗದವರ ಉಸಿರು

16 mdg urusu
Published on

ಮುಂಡರಗಿ: ಭಾರತ ದೇಶ ವಿವಿಧತೆಯಲ್ಲಿ ಏಕತೆ ಹೊಂದಿದೆ. ಅನೇಕ ಜಾತಿ, ಜನಾಂಗದವರು, ಹಲವು ಭಾಷಿಗರನ್ನು ಒಳಗೊಂಡಿದೆ. ಸರ್ವರಿಗೂ ಸಮಪಾಲು, ಸಮಬಾಳು ಎನ್ನುವ ತತ್ತದಡಿ ನಡೆದು ಬಂದಿರುವುದು ನಮ್ಮ ಈ ದೇಶದ ವಿಶೇಷತೆ. ಈ ನೆಲದಲ್ಲಿ ಬಾಳುತ್ತಿರುವ ನಾವುಗಳೇ ಪುಣ್ಯವಂತರು ಎಂದು ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ತಾಲೂಕಿನ ಕಲಕೇರಿ ಗ್ರಾಮದಲ್ಲಿ ಹಜರತ್ ಸೈಯ್ಯದ್ ಬಾಷಾ ರಹಮತುಲ್ಲಾ ಅಲೈ ಉರುಸು ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಧರ್ಮಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಈ ಪುಣ್ಯ ಭೂಮಿಯಲ್ಲಿ ಬೇಧ-ಭಾವವಿಲ್ಲದೆ ಎಲ್ಲರೂ ಒಂದೇ ಭಾವನೆಯಲ್ಲಿದ್ದೇವೆ ಎನ್ನುವುದಕ್ಕೆ ಈ ಧರ್ಮಸಭೆ ಸಾಕ್ಷಿಯಾಗಿದೆ. ಅಲ್ಪಸಂಖ್ಯಾತರಿಗೆ ಮಾತ್ರ ಉರುಸ್ ಎಂಬ ಭಾವನೆ ಸಲ್ಲದು, ಸರ್ವ ಜನಾಂಗದವರು, ಉರುಸ್, ಜಾತ್ರೆಗಳನ್ನು ಆಚರಿಸುವುದು ಕಾಣುತ್ತೇವೆ. ಎಲ್ಲ ಜಾತಿ- ಜನಾಂಗದವರು ಕೂಡಿಕೊಂಡು ಭಾವೈಕ್ಯದಿಂದ ಉರುಸ್ ಆಚರಿಸುತ್ತಿರುವುದು ವಿಶೇಷ. ಇಂತಹ ಕಾರ್ಯಗಳು ಭಾರತದಲ್ಲಿ ಮಾತ್ರ ನಡೆಯುತ್ತವೆ. ಪ್ರಪಂಚದ ಬೇರೆ ದೇಶಗಳಲ್ಲಿ ಇದನ್ನು ನೋಡಲು ಸಾಧ್ಯವಿಲ್ಲ ಎಂದರು.

ಕಲಕೇರಿ ಅಂಜುಮನ್ ಎ ಇಸ್ಲಾಂ ಕಮಿಟಿ ಅಧ್ಯಕ್ಷ ಜಹೀರ್ ಮುಲ್ಲಾ ಮಾತನಾಡಿ, ಕಲಕೇರಿ ಗ್ರಾಮದಲ್ಲಿ ಸುತ್ತಮುತ್ತಲಿನ ಎಲ್ಲ ಗ್ರಾಮಗಳ ಎಲ್ಲ ಜಾತಿ, ಜನಾಂಗದವರು ಬಂದು ಉರುಸ್ ಆಚರಿಸುತ್ತಿದ್ದಾರೆ. ಹಿಂದು- ಮುಸ್ಲಿಂ ಭಾವೈಕ್ಯದ ಕಾರ್ಯಕ್ರಮವಾಗಿದೆ. ಹಿರಿಯರು ಹಾಕಿಕೊಟ್ಟಿರುವ ದಾರಿಯಲ್ಲಿ ಸಾಗುತ್ತಿದ್ದೇವೆ ಎಂದು ತಿಳಿಸಿದರು. ಬೆಳಗಟ್ಟಿ ಹಜರತ್ ಮುಸ್ತಫಾ ಖಾದ್ರಿ ಸಾಹೇಬ್, ಕಲಕೇರಿ- ವಿರುಪಾಪುರದ ಶ್ರೀ ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ದರ್ಗಾ ಕಮಿಟಿ ಅಧ್ಯಕ್ಷ ಎಂ. ಯುಮಕಾಂದಾರ ಅಧ್ಯಕ್ಷತೆ ವಹಿಸಿದ್ದರು. ಧರ್ಮಸಭೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.

ಕಲಕೇರಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀದೇವಿ ನಾಯ್ಕರ್, ಲಿಂಗರಾಜಗೌಡ ಪಾಟೀಲ, ಎಸ್.ಡಿ. ಮಕಾಂದಾರ, ನಾಗರಾಜ ಹೊಂಬಳಗಟ್ಟಿ, ಮುತ್ತನಗೌಡ ಪಾಟೀಲ, ಅಂದಪ್ಪ ಮೇಟಿ, ಸೋಮಣ್ಣ ದೇಸಾಯಿ, ರಮೇಶ ಹುಳಕಣ್ಣವರ, ಮಲ್ಲಣ್ಣ ದೇಸಾಯಿ, ಬಸವರಾಜ ದೇಸಾಯಿ, ಆಸಿಂಫೀರ್ ಲಕ್ಷ್ಮೇಶ್ವರ, ಬಾಬಾಜಾನ್ ಅಳವಂಡಿ, ಜಾಫರಸಾಬ್ ಮಕಾಂದಾರ, ನನ್ನೇಸಾಬ್ ಖತೀಬ್, ಸನಾವುಲ್ಲಾ ಮಕಾಂದಾರ, ಎಂ.ಎ. ಮಾಳೇಕೊಪ್ಪ, ಆರ್.ಎಲ್. ಬಾದಾಮಿ, ಫಕೀರಪ್ಪ ಬನ್ನಿಕೊಪ್ಪ ಇತರರಿದ್ದರು. ಡಿ.ಎಂ. ಶಿರೋಳ ಸ್ವಾಗತಿಸಿ, ಶಾಬುದ್ದೀನ್ ನದಾಫ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net