ಬ್ರಹ್ಮಕಲಶೋತ್ಸವದಿಂದ ನಾಡಿನಲ್ಲಿ ಒಗ್ಗಟ್ಟು

Bdk_Yethadka-Temple
Published on

ಬದಿಯಡ್ಕ: ನಾಡು ಒಂದಾಗುವ ಅದ್ಭುತ ಕ್ಷಣವೆಂದರೆ ಆ ಊರಿನ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವಗಳು. ತನು-ಮನ-ಧನದ ಬಂಧದ ಮೂಲಕ ಭಗವದ್ಭಕ್ತರು ಸೇವಾ ಕೈಂಕರ್ಯ ತೊಡಬೇಕು. ಊರಿನ ಶ್ರೇಯಸ್ಸು ಅಭಿವೃದ್ಧಿ ನೆಲೆಗೊಳ್ಳುತ್ತದೆ ಎಂದು ಉದ್ಯಮಿ ಎಸ್.ಎನ್.ಮಯ್ಯ ತಿಳಿಸಿದರು.

ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವ-25 ಅಂಗವಾಗಿ ಹಮ್ಮಿಕೊಂಡ ಶಿವ ಪಂಚಾಕ್ಷರಿ ಜಪಲಿಪಿ ಯಜ್ಞ ಪುಸ್ತಕದ ದ್ವಿತೀಯ ಆವೃತ್ತಿ ಬಿಡುಗಡೆಗೊಳಿಸಿ ಮಾತನಾಡಿದರು.

ಸ್ವಾಗತ ಸಮಿತಿ ಸದಸ್ಯೆ ಗೀತಾ ಎಂ.ಭಟ್ ಬದಿಯಡ್ಕ ಮೊದಲ ಪ್ರತಿ ಸ್ವೀಕರಿಸಿದರು. ಬ್ರಹ್ಮ ಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ವೈ.ಸುಬ್ರಾಯ ಭಟ್ ಸಭಾಧ್ಯಕ್ಷತೆ ವಹಿಸಿದ್ದರು. ಸಹ ಗೌರವಾಧ್ಯಕ್ಷ ವೈ.ಶಂಕರ ಭಟ್, ಉಪಾಧ್ಯಕ್ಷ ಪತ್ತಡ್ಕ ಗಣಪತಿ ಭಟ್, ಉಷಾ ಶಾಮ ಭಟ್ಟರು ಉಪಸ್ಥಿತರಿದ್ದರು.
ವೈದ್ಯ ಡಾ.ಮೋಹನಕುಮಾರ ವೈ.ಎಸ್ ಮಾತನಾಡಿದರು. ವಿವಿಧ ಧಾರ್ಮಿಕ ವಿಧಿವಿಧಾನದ ನಂತರ ಶ್ರೀಧರ ತಂತ್ರಿಗಳ ನೇತೃತ್ವದಲ್ಲಿ ದೇವರುಗಳನ್ನು ಬಾಲಾಲಯದಲ್ಲಿ ಸ್ಥಾಪಿಸಲಾಯಿತು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವೈ.ಶ್ಯಾಮ ಭಟ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿ ಸಂಯೋಜಕ ಚಂದ್ರಶೇಖರ ಏತಡ್ಕ ನಿರೂಪಿಸಿದರು. ಇನ್ನೋರ್ವ ಸಂಯೋಜಕ ಡಾ.ವೈ.ವಿ.ಕೃಷ್ಣಮೂರ್ತಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net