

ಮಡಿಕೇರಿ: ಗೌಡ ಫುಟ್ಬಾಲ್ ಅಕಾಡೆಮಿ ಕೊಡಗು ಇವರ ವತಿಯಿಂದ ಮೂರನೇ ವರ್ಷದ ಯುನಿಟಿ ಕಪ್ ಪಂದ್ಯಾಟದಲ್ಲಿ ಕಟ್ಟೆಮಾಡು ಹಾಗೂ ಅರೆಕಾಡು ತಂಡಗಳು ಫೈನಲ್ ಪ್ರವೇಶ ಪಡೆಯಿತು.
ಮರಗೋಡು ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಲೀಗ್ ಮಾದರಿಯಲ್ಲಿ ನಡೆದ ಪಂದ್ಯಾಟದಲ್ಲಿ ಕಟ್ಟೆಮಾಡು, ಮರಗೋಡು, ಹೋಸ್ಕೇರಿ ಹಾಗೂ ಅರೆಕಾಡು ಗ್ರಾಮಗಳ ತಂಡಗಳು ಪಾಲ್ಗೊಂಡಿತ್ತು.
ಮೊದಲ ಪಂದ್ಯದಲ್ಲಿ ಮರಗೋಡು ಹಾಗೂ ಕಟ್ಟೆಮಾಡು ಗ್ರಾಮಗಳ ನಡುವೆ ನಡೆಯಿತು. ಇತ್ತಂಡಗಳು ೨-೨ ಗೋಲು ದಾಖಲಿಸುವ ಮೂಲಕ ಸಮಬಲ ಸಾಧಿಸಿತು. ಮರಗೋಡು ತಂಡದ ಪರ ಚೇತನ್ ೨ ಗೋಲು ದಾಖಲಿಸಿದರೆ, ಕಟ್ಟೆಮಾಡು ತಂಡದ ಪರ ಸುಜಯ್ ಮತ್ತು ರಾಜ ತಲಾ ಒಂದೊಂದು ಗೋಲು ದಾಖಲಿಸಿದರು. ಡ್ರಾದಲ್ಲಿ ಅಂತ್ಯವಾದ ಪರಿಣಾಮ ತಲಾ ೧-೧ ಪಾಯಿಂಟ್ ನೀಡಲಾಯಿತು.
ಎರಡನೇ ಪಂದ್ಯದಲ್ಲಿ ಅರೆಕಾಡು ಹಾಗೂ ಹೋಸ್ಕೇರಿ ಗ್ರಾಮದ ತಂಡಗಳ ನಡುವೆ ನಡೆದು ಅರೆಕಾಡು ತಂಡ ೨-೧ ಗೋಲುಗಳಿಂದ ಮೇಲುಗೈ ಸಾಧಿಸಿತ್ತು. ಅರೆಕಾಡು ತಂಡದ ಪರ ಭರತ್ ಹಾಗೂ ಸಫನ್ ತಲಾ ಒಂದೊಂದು ಗೋಲು ದಾಖಲಿಸಿದರೆ, ಹೊಸ್ಕೇರಿ ತಂಡದ ಪರ ರಂಜಿತ್ ೧ ಗೋಲು ದಾಖಲಿಸಿದರು.
ಮೂರನೇ ಪಂದ್ಯದಲ್ಲಿ ಹೋಸ್ಕೇರಿ ಹಾಗೂ ಕಟ್ಟೆಮಾಡು ತಂಡಗಳು ಯಾವುದೇ ಗೋಲು ದಾಖಲಿಸದೆ ಸಮಬಲ ಸಾಧಿಸಿತು. ಪರಿಣಾಮ ಇಂತಂಡಗಳಿಗೆ ೧-೧ ಪಾಯಿಂಟ್ ನೀಡಲಾಯಿತು. ನಾಲ್ಕನೇ ಪಂದ್ಯ ಅರೆಕಾಡು ಹಾಗೂ ಮರಗೋಡು ತಂಡಗಳ ನಡುವೆ ನಡೆಯಿತು. ಇದರಲ್ಲಿ ಅರೆಕೌಡು ತಂಡ ೧ ಗೋಲು ಹೊಡೆಯುವದರ ಮುಖಾಂತರ ಮೇಲುಗೈ ಸಾಧಿಸಿ ಗೆಲುವು ಸಾಧಿಸಿತು. ಅರೆಕಾಡು ತಂಡದ ಪರ ಅಜೀಜ್ ೧ ಗೋಲು ದಾಖಲಿಸಿದರು.
ಐದನೇ ಪಂದ್ಯದಲ್ಲಿ ಮರಗೋಡು ತಂಡವನ್ನು ಹೋಸ್ಕೇರಿ ತಂಡ ೧-೦ ಗೋಲುಗಳಿಮದ ಸೋಲಿಸಿತು. ಹೊಸ್ಕೇರಿ ತಂಡದ ಪರ ಗಗನ್ ೧ ಗೋಲು ದಾಖಲಿಸಿದರು. ಲೀಗ್ ಮಾದರಿಯ ಕೊನೆಯ ಪಂದ್ಯದಲ್ಲಿ ಅರೆಕಾಡು ತಂಡವನ್ನು ಕಟ್ಟೆಮಾಡು ತಂಡ ೩-೧ ಗೋಲುಗಳಿಂದ ಮಣಿಸಿತು. ಅರೆಕಾಡು ತಂಡದ ಪರ ಅಜೀಜ್ ೧ ಗೋಲು ದಾಖಲಿಸಿದರೆ, ಕಟ್ಟೆಮಾಡು ತಂಡದ ಪರ ರಾಜ ೩ ಗೋಲು ದಾಖಲಿಸಿದರು.
ಲೀಗ್ ಮಾದರಿಯ ಪಂದ್ಯಾಟದಲ್ಲಿ ಕಟ್ಟೆಮಾಡು ೪ ಪಾಯಿಂಟ್, ಮರಗೋಡು ೧ ಪಾಯಿಂಟ್, ಹೋಸ್ಕೇರಿ ೩ ಪಾಯಿಂಟ್ ಹಾಗೂ ಅರೆಕಾಡು ೪ ಪಾಯಿಂಟ್ ಪಡೆದುಕೊಂಡಿತು. ಅತೀ ಹೆಚ್ಚು ಪಾಯಿಂಟ್ ಪಡೆದ ಕಟ್ಟೆಮಾಡು ಮತ್ತು ಅರೆಕಾಡು ತಂಡಗಳು ಫೈನಲ್ ಪ್ರವೇಶ ಪಡೆಯಿತು. ಮೇ.೨೬ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಕಟೆಮಾಡು ಹಾಗೂ ಅರೆಕಾಡು ತಂಡ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿದೆ.