ಒಂದುಗೂಡಿಸಿದ ಭಾರತ ಜೋಡೋ

09Jaggu17
ಕಾಂಗ್ರೆಸ್‌ನ ಭಾರತ ಜೋಡೋ ಯಾತ್ರೆಯ ವಾರ್ಷಿಕೋತ್ಸವದ ನಿಮಿತ್ತ ಬೆಳಗಾವಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಪಾದಯತ್ರೆ ನಡೆಸಿದರು. ಆಸ್ೀ ಸೇಠ, ಮಹಾಂತೇಶ ಕೌಜಲಗಿ, ರಾಹುಲ್ ಜಾರಕಿಹೊಳಿ ಇತರರಿದ್ದರು.
Published on

ಬೆಳಗಾವಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂ ನೇತೃತ್ವದಲ್ಲಿ ನಡೆದ ಭಾರತ ಜೋಡೋ ಯಾತ್ರೆಯ ವಾರ್ಷಿಕೋತ್ಸವದ ನಿಮಿತ್ತ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಶನಿವಾರ ಪಾದಯತ್ರೆ ನಡೆಸಿದರು. ನಗರದ ಕಾಂಗ್ರೆಸ್ ಭವನದಿಂದ ಆರಂಭವಾದ ಭಾರತ ಜೋಡೋ ನೆನಪಿನ ಯಾತ್ರೆ ಚನ್ನಮ್ಮ ವೃತ್ತದವರೆಗೂ ಸಾಗಿತು.

ಶಾಸಕ ಆಸ್ೀ ಸೇಠ ಮಾತನಾಡಿ, ರಾಹುಲ್ ಗಾಂ ಅವರ ಭಾರತ ಜೋಡೋ ಯಾತ್ರೆ ವಿವಿಧತೆಯಲ್ಲಿ ಏಕತೆ ಸಾರುವ ಮೂಲಕ ಭಾರತದ ಎಲ್ಲ ಸಮಾಜ, ವರ್ಗಗಳನ್ನು ಒಗ್ಗೂಡಿಸಿ ಎಲ್ಲರಲ್ಲಿ ಐಕ್ಯತೆ ಮೂಡಿಸಿದೆ ಎಂದರು.

ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ರಾಹುಲ್ ಗಾಂ ಅವರ ಭಾರತ ಜೋಡೋ ಯಾತ್ರೆಯ ಲವಾಗಿ, ದೇಶದ ಜನ ಅನುಭವಿಸುತ್ತಿರುವ ಕಷ್ಟಗಳು, ರಾಹುಲ್ ಗಾಂ ಅವರ ಗಮನಕ್ಕೆ ಬಂದ ಕಾರಣ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳನ್ನು ಘೋಷಿಸಿ ಸಮರ್ಪಕವಾಗಿ ಅನುಷ್ಠಾನ ಮಾಡುತ್ತಿದೆ ಎಂದರು.

ಯುವನಾಯಕ ರಾಹುಲ್ ಜಾರಕಿಹೊಳಿ ಮಾತನಾಡಿ, ರಾಹುಲ್ ಗಾಂ ಅವರ ಸಾವಿರಾರು ಕಿ.ಮೀ. ಪಾದಯಾತ್ರೆ ದೇಶದ ಒಗ್ಗಟ್ಟಿಗೆ ಕಾರಣವಾಗಿದೆ. ಎಲ್ಲ ಮನಸ್ಸುಗಳನ್ನು ಒಂದುಗೂಡಿಸಿದ ಈ ಯಾತ್ರೆ ವಿಶ್ವದಲ್ಲೇ ಹೊಸ ಇತಿಹಾಸ ನಿರ್ಮಿಸಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪತಾಕೆ ಹಾರಲಿದೆ ಎಂದರು.

ವಿನಯ ನಾಲಗಟ್ಟಿ, ರಾಜಾ ಸಲೀಂ ಕಾಶೀಂನವರ, ಬಸವರಾಜ ಶೇಗಾವಿ, ಅನಂತಕುಮಾರ ಬ್ಯಾಕೋಡ, ಆರ್.ಪಿ. ಪಾಟೀಲ, ಅಜೀಂ ಪಟವೇಗಾರ, ಪ್ರದೀಪ ಎಂ.ಜೆ., ನೂರಾರು ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net