ಒಗ್ಗಟ್ಟಾದ ಎ.ಬಿ. ಪಾಟೀಲ, ಕತ್ತಿ ಕುಟುಂಬ

28SANKESHWAR1
Published on

ಹುಕ್ಕೇರಿ: ಸಹಕಾರ ಮಹರ್ಷಿ ದಿ. ಅಪ್ಪಣ್ಣಗೌಡರು ಸ್ಥಾಪಿಸಿದ ಹಲವಾರು ಸಂ ಸಂಸ್ಥೆಗಳಿಂದ ಕತ್ತಿ ಮತ್ತು ಪಾಟೀಲ ಕುಟುಂಬ ರಾಜಕೀಯವಾಗಿ ಉನ್ನತ ಸ್ಥಾನಮಾನ ಪಡೆದಿವೆ. ಅದರ ಋಣ ತೀರಿಸಲು ಜನರ ಅಪೇೆಯಂತೆ ನಾವು ಒಂದಾಗಿದ್ದೇವೆ. ಹಿರಾ ಶುಗರ್ಸ್​ ಉಳಿಸಿ ಬೆಳೆಸುತ್ತೇವೆ ಎಂದು ಮಾಜಿ ಸಚಿವ ಎ.ಬಿ.ಪಾಟೀಲ ಹೇಳಿದರು.

ತಾಲೂಕಿನ ಸಂಕೇಶ್ವರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಕಾರ್ಖಾನೆಗೆ ನೀಡಿದ 100 ಕೋಟಿ ರೂ. ಸಾಲಕ್ಕೆ ಬಡ್ಡಿ ಹೆಚ್ಚಿಸಿದ್ದಾರೆ. ಇದರಿಂದ ನಾನು ಮತ್ತು ನಿರ್ದೇಶಕರು ಮಾಜಿ ಸಂಸದ ರಮೇಶ ಕತ್ತಿ, ಶಾಸಕ ನಿಖಿಲ ಕತ್ತಿ ಅವರೊಂದಿಗೆ ಚರ್ಚಿಸಿ ಈ ಕಾರ್ಖಾನೆ ಉಳಿಸಿ ಬೆಳೆಸಲು ಪಣ ತೊಟ್ಟಿದ್ದೇವೆ ಎಂದರು.

ಮಾಜಿ ಸಂಸದ ರಮೇಶ ಕತ್ತಿ ಮಾತನಾಡಿ, ಮೂರು ದಶಕಗಳಿಂದ ಮಾಜಿ ಸಚಿವ ಎ.ಬಿ.ಪಾಟೀಲ ಮತ್ತು ನಮ್ಮ ಕುಟುಂಬ ರಾಜಕೀಯವಾಗಿ ದೂರವಾಗಿದ್ದೇವು. ಎರಡೂ ಕುಟುಂಬಗಳನ್ನು ಬೆಳೆಸಿದ ಕಾರ್ಖಾನೆ ಸಂಕಷ್ಟದಲ್ಲಿ ಇದ್ದಿದ್ದರಿಂದ ಒಂದಾಗಿದ್ದು, ಕಾರ್ಖಾನೆ ಅಭಿವದ್ಧಿಗೆ ಶ್ರಮಿಸುತ್ತೇವೆ ಎಂದರು.

ಹಿರಾ ಶುಗರ್ಸ್​ ಅಧ್ಯ ಅಜ್ಜಪ್ಪ ಕಲ್ಲಟ್ಟಿ ಮಾತನಾಡಿ, ಜೊಲ್ಲೆಯವರು ನೀಡಿದ ಸಾಲಕ್ಕೆ ಶೇ.15 ಬಡ್ಡಿ ಆಕರಿಸಿದ್ದರಿಂದ ಅನಿವಾರ್ಯವಾಗಿ ಅವರಿಂದ ದೂರವಾಗಿ ಮಾಜಿ ಸಂಸದ ರಮೇಶ ಕತ್ತಿ ಮತ್ತು ಮಾಜಿ ಸಚಿವ ಎ.ಬಿ.ಪಾಟೀಲ ಅವರ ಮಾರ್ಗದರ್ಶನದಲ್ಲಿ ಕಾರ್ಖಾನೆ ನಡೆಸುತ್ತೇವೆ ಎಂದರು.

ಮಾಜಿ ಸಂಸದ ರಮೇಶ ಕತ್ತಿ ಮತ್ತು ಅವರ ಮಕ್ಕಳು, ಮಾಜಿ ಸಚಿವ ಎ.ಬಿ.ಪಾಟೀಲ ಮತ್ತು ಅವರ ಪುತ್ರ ಶಂಕರಲಿಂಗ ಮಠಕ್ಕೆ ತೆರಳಿ ಸಚ್ಚಿದಾನಂದ ಶ್ರೀಗಳ ಆಶೀರ್ವಾದ ಪಡೆದರು. ಕಾರ್ಖಾನೆಯಲ್ಲಿ ದಿ.ಅಪ್ಪಣ್ಣಗೌಡರ ಮತ್ತು ಬಸಗೌಡ ಪಾಟೀಲ ಅವರ ಪುತ್ಥಳಿಗೆ ಪೂಜೆ ಸಲ್ಲಿಸಿದರು.

ಶಾಸಕ ನಿಖಿಲ ಕತ್ತಿ, ಕಾರ್ಖಾನೆ ಉಪಾಧ್ಯ ಅಶೋಕ ಪಟ್ಟಣಶೆಟ್ಟಿ, ಅಪ್ಪಾಸಾಹೇಬ ಶಿರಕೋಳಿ, ಗಜಾನನ ಕ್ವಳ್ವಿ, ಆರ್​.ಬಿ.ಪಾಟೀಲ, ರೋಹನ ನೇಸರಿ, ಸುನೀಲ ಪರ್ವತರಾವ, ಸತ್ಯೆಪ್ಪ ನಾಯಿಕ, ಕಲಗೌಡ ಪಾಟೀಲ, ಪೃಥ್ವಿ ಕತ್ತಿ, ಪವನ ಕತ್ತಿ, ವಿನಯಕುಮಾರ ಪಾಟೀಲ, ಗುರು ಕುಲಕರ್ಣಿ, ಶೀತಲ ಬ್ಯಾಳಿ, ನಂದು ಮುಡಸಿ, ಗುಂಡು ಪಾಟೀಲ, ಭೀಮಪ್ಪ ಚೌಗಲಾ ಇತರರಿದ್ದರು.

ರಾಜಕೀಯದಲ್ಲಿ ಎ.ಬಿ.ಪಾಟೀಲರು ಕಾಂಗ್ರೆಸ್​ ಪಕ್ಕೆ ದುಡಿದರೆ, ನಾವು ಬಿಜೆಪಿಗಾಗಿ ಶ್ರಮಿಸುತ್ತೇವೆ. ಆದರೆ ಸಹಕಾರಿ ೇತ್ರ ಪ, ಜಾತಿ ಮತ್ತು ರಾಜಕೀಯ ರಹಿತವಾಗಿದೆ. ಆದ್ದರಿಂದ ನಾವಿಬ್ಬರೂ ಸಹಕಾರ ೇತ್ರದಲ್ಲಿ ಮಾತ್ರ ಒಂದಾಗಿದ್ದೇವೆ ರಮೇಶ ಕತ್ತಿ ಮಾಜಿ ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net