ಕುಂದಾಪ್ರ ಕನ್ನಡಕ್ಕೆ ವಿಶಿಷ್ಟ ಸ್ಥಾನಮಾನ

gan (13)
Published on

ಗಂಗೊಳ್ಳಿ: ಕುಂದಾಪ್ರ ಕನ್ನಡಕ್ಕೆ ರಾಜ್ಯದಲ್ಲಿ ವಿಶಿಷ್ಟ ಸ್ಥಾನಮಾನವಿದ್ದು, ಸಂರಕ್ಷಿಸುವ ಕೆಲಸ ನಡೆಯಬೇಕು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ ಹೇಳಿದರು.

ವಿಶ್ವ ಕುಂದಾಪ್ರ ದಿನಾಚರಣೆ ಪ್ರಯುಕ್ತ ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಆಶ್ರಯದಲ್ಲಿ ಸರ್ಕಾರಿ ಪದವಿ ಪೂವ ಕಾಲೇಜು ವಠಾರದಲ್ಲಿ ಭಾನುವಾರ ನಡೆದ ಗ್ರಾಮೀಣ ಕ್ರೀಡಾ ಸಡಗರ ‘ಲಗೋರಿ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಾಜಿ ಸಚಿವ ಕೆ.ಜಯಪ್ರಕಾಶ ಹೆಗ್ಡೆ ವಾತನಾಡಿದರು. ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಅಧ್ಯಕ್ಷ ಕಿಶೋರ್ ಕುವಾರ್ ಅಧ್ಯಕ್ಷತೆ ವಹಿಸಿದ್ದರು. ನಿಯೋಜಿತ ಲಯನ್ಸ್ ಜಿಲ್ಲಾಧ್ಯಕ್ಷ ರಾಜು ಕೋಟ್ಯಾನ್, ತಾಲೂಕು ಯುವಜನ ಕ್ರೀಡಾಧಿಕಾರಿ ಕುಸುವಾಕರ ಶೆಟ್ಟಿ, ಪತ್ರಕರ್ತ ರಾಜೇಶ ಕೆ.ಸಿ., ಬಿಜೆಪಿ ಬೈಂದೂರು ಮಂಡಲ ವಾಜಿ ಅಧ್ಯಕ್ಷ ದೀಪಕ ಕುವಾರ್ ಶೆಟ್ಟಿ, ಕಾಲೇಜು ಉಪ ಪ್ರಾಂಶುಪಾಲ ಕಿರಣ್ ಹೆಗ್ಡೆ, ಉಪನ್ಯಾಸಕ ಉದಯ ಕುವಾರ್ ಶೆಟ್ಟಿ ಎಸ್‌ಬಿಐ ಕಾರವಾರ ವಲಯ ರೀಜಿನಲ್ ವ್ಯಾನೇಜರ್ ಮುರಳೀಧರ ಮತ್ತಿತರರು ಉಪಸ್ಥಿತರಿದ್ದರು. ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಉಪಾಧ್ಯಕ್ಷ ರಾಜೇಶ ಕಾವೇರಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.

ನಾಡಗೀತೆ ವಾತು ವಾತ್ರ ಕೇಳುವುದು. ಅದರಂತೆ ಯಾಕೆ ನಡೆದುಕೊಳ್ಳುತ್ತಿಲ್ಲ ? ಈ ಭಾಗವು ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು. ಗ್ರಾಮೀಣ ಕ್ರೀಡೆಗಳಿಗೂ ಸರ್ಕಾರದಿಂದ ಅನುದಾನ ಒದಗಿಸಬೇಕು. ಜಾತಿ-ಮತ ಭೇದವಿಲ್ಲದೆ ನಡೆಯುವ ಇಂತಹ ಕ್ರೀಡಾಕೂಟದಿಂದ ಉತ್ತಮ ವಾತಾವರಣ ನಿರ್ವಾಣ ಆಗುತ್ತದೆ. ಜನರಲ್ಲಿ ಪರಸ್ಪರ ಸೌಹಾದರ್ತೆ ಬೆಳೆಯುತ್ತದೆ. -ಕೆ.ಜಯಪ್ರಕಾಶ ಹೆಗ್ಡೆ ಮಾಜಿ ಸಚಿವ. https://www.vijayavani.net/nandikur-school-upgraded-order-issued https://www.vijayavani.net/fundraising-for-mothers-treatment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net