ಪತಂಜಲಿಯಿಂದ ವಿಶಿಷ್ಟ ರಕ್ಷಾ ಬಂಧನ

h9-patanjali
Published on

ಹುಬ್ಬಳ್ಳಿ: ಇಲ್ಲಿಯ ಕೇಶ್ವಾಪುರದ ಪತಂಜಲಿ ರಾಜ್ಯ ಕಾರ್ಯಾಲಯದಲ್ಲಿ ಪತಂಜಲಿ ಯೋಗ ಪೀಠದ ಕರ್ನಾಟಕ ವರಿಷ್ಠ ರಾಜ್ಯ ಪ್ರಭಾರಿ, ಅಂತಾರಾಷ್ಟ್ರೀಯ ಯೋಗ ಗುರು ಭವರಲಾಲ್ ಆರ್ಯ ಅವರ ಮಾರ್ಗದರ್ಶನದಲ್ಲಿ ನಾಡಿನ ಒಳಿತಿಗಾಗಿ ವಿಶೇಷ ಅಗ್ನಿಹೋತ್ರ ಅನುಷ್ಠಾನ ಮಾಡುವುದರ ಮೂಲಕ ರಕ್ಷಾ ಬಂಧನ ಕಾರ್ಯಕ್ರಮವನ್ನು ಶನಿವಾರ ಏರ್ಪಡಿಸಲಾಗಿತ್ತು.

ಯೋಗ ಗುರು ಭವರಲಾಲ್ ಆರ್ಯ ಮಾತನಾಡಿ, ಶೋಷಣೆಗೆ ಒಳಗಾದವರು, ಬಡವರು, ಶೋಷಿತರು, ಕೂಲಿ ಕಾರ್ಮಿಕರು, ಕೈದಿಗಳು, ನೊಂದವರಿಗೆ ಈ ರಕ್ಷಾ ಬಂಧನ ಸಂದರ್ಭದಲ್ಲಿ ರಾಕಿ ಕಟ್ಟಿ, ರಕ್ಷಾ ಸೂತ್ರ ಕಟ್ಟಿ ಧೈರ್ಯ ತುಂಬುವ ಕೆಲಸ ಆಗಬೇಕು. ಆರೋಗ್ಯ ರಕ್ಷಣೆ ಸಂಕಲ್ಪ ಮಾಡಿ ಪ್ರತಿ ದಿನ ಯೋಗ, ಅಗ್ನಿಹೋತ್ರ ಮಾಡುವಂತೆ ಪ್ರೇರಣೆ ನೀಡಬೇಕು ಎಂದರು.

ನಂತರ ಪತಂಜಲಿ ಪರಿವಾರ ಹುಬ್ಬಳ್ಳಿ-ಧಾರವಾಡದ ಸಹೋದರಿಯರು ಎಲ್ಲ ಸಹೋದರರಿಗೆ ರಕ್ಷಾ ಸೂತ್ರ ಕಟ್ಟಿ ಶುಭಾಶಯ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net