ಆರ್ಥಿಕ ಬಲವರ್ಧನೆಗೆ ಸಂಘಗಳು ಅಗತ್ಯ

25blrp1
ಬೇಲೂರಿನಲ್ಲಿ ಭಾನುವಾರ ಆಯೋಜಿಸಿದ್ದ ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘವನ್ನು ಅತಿಥಿಗಳು ಉದ್ಘಾಟಿಸಿದರು. ತೀರ್ಥಕುಮಾರಿ ವೆಂಕಟೇಶ್, ತುಂಬಲ ರಾಮಣ್ಣ, ಡಾ.ರಮೇಶ್ ಇತರರು ಇದ್ದರು.
Published on

ಬೇಲೂರು: ಸಮುದಾಯದ ಆರ್ಥಿಕ ಚಟುವಟಿಕೆಗಳಿಗೆ ಸಹಕಾರ ಸಂಘಗಳು ಹಾಗೂ ಬ್ಯಾಂಕ್‌ಗಳು ಅಗತ್ಯವಾಗಿವೆ ಎಂದು ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ಹೇಳಿದರು.


ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘವನ್ನು ಉದ್ಘಾಟಿಸಿ ಮಾತನಾಡಿ, ಸಮಾಜ ನಮಗೆ ಏನು ಕೊಟ್ಟಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನಾವು ಏನು ಕೊಟ್ಟಿದ್ದೇವೆ ಎಂಬುದನ್ನು ಅರಿತು ಸಮಾಜದ ಒಳಿತಿಗಾಗಿ ಶ್ರಮಿಸಬೇಕು. ಸಂಘದ ನೇತೃತ್ವ ವಹಿಸಿರುವ ಡಾ.ರಮೇಶ್ ಮತ್ತು ತಂಡ ಶ್ರಮವಹಿಸಿ 500ಕ್ಕೂ ಹೆಚ್ಚು ಷೇರು ಸಂಗ್ರಹಿಸಿ ಅಧಿಕೃತವಾಗಿ ಸಂಘವನ್ನು ಉದ್ಘಾಟಿಸುವ ಮೂಲಕ ಸಮುದಾಯದ ಆರ್ಥಿಕ ಬಲವರ್ಧನೆಗೆ ಮುಂದಾಗಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.


ಸಂಘದ ಅಧ್ಯಕ್ಷ ತುಂಬಲ ರಾಮಣ್ಣ ಮಾತನಾಡಿ, ದಲಿತ ಸಮುದಾಯದವರ ಆರ್ಥಿಕ ಬೆಳವಣಿಗೆಗೆ ಎವಿಎಸ್‌ಎಸ್ ಮಹತ್ವವಾದ ಪಾತ್ರವಹಿಸಲು ಮುಂದಾಗಿದೆ. ಡಾ.ಅಂಬೇಡ್ಕರ್ ಅವರ ಆಶಯದಂತೆ ಅಂಬೇಡ್ಕರ್ ಹೆಸರಿನಲ್ಲಿ ಸಹಕಾರ ಸಂಘ ತೆರೆದು ಸದಸ್ಯತ್ವ ಅಭಿಯಾನ ಆರಂಭಿಸಲಾಗಿದೆ. ಸಂಘದ ಷೇರುದಾರರಿಗೆ ವ್ಯಾಪಾರ, ಸಣ್ಣ ಉದ್ಯಮಕ್ಕೆ ವೈಯಕ್ತಿಕ ಸಾಲ, ಸ್ಥಿರಾಸ್ತಿ ಮೇಲೆ ಮನೆ ಕಟ್ಟಲು ಸಾಲ ಸೌಲಭ್ಯ ನೀಡಲಾಗುವುದು ಎಂದು ತಿಳಿಸಿದರು.
ಎವಿಎಸ್‌ಎಸ್ ಅಧ್ಯಕ್ಷ ಡಾ.ರಮೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದು ಸಮಾಜದ ಅಭಿವೃದ್ಧಿಗೆ ಅಂಬೇಡ್ಕರ್ ಮತ್ತು ಬುದ್ಧರ ಆಶಯದಂತೆ ಮುನ್ನಡೆಸಿಕೊಂಡು ಸಾಗಲಿದ್ದೇವೆ ಎಂದರು.


ಪುರಸಭೆ ಮಾಜಿ ಅಧ್ಯಕ್ಷ ಚ.ನಾ.ದಾನಿ, ದಸಂಸ(ಅಂಬೇಡ್ಕರ್ ವಾದ)ಜಿಲ್ಲಾ ಪ್ರಧಾನ ಸಂಚಾಲಕ ಲಕ್ಷ್ಮಣ್, ಕ್ಷೇತ್ರ ಸಮನ್ವಯಾಧಿಕಾರಿ ಶಿವಮರಿಯಪ್ಪ, ಎಸ್‌ಸಿ, ಎಸ್‌ಟಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್, ಗಾಂಧಾರ ಬುದ್ಧ ವಿಹಾರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಅರೇಹಳ್ಳಿ ರಾಜು, ಎವಿಎಸ್‌ಎಸ್ ನಿರ್ದೇಶಕರಾದ ಮಂಜುನಾಥ್, ದೇವರಾಜು, ಚಂದ್ರು ಮೌರ್ಯ, ಕುಮಾರ್ ಗುಪ್ತ, ಮಹೇಂದ್ರ ಕುಮಾರ್, ರವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net