ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ಬಹುತ್ವದ ಭಾರತವನ್ನು ಒಡೆಯುವ ಹುನ್ನಾರ ನಡೆಯುತ್ತಿದ್ದು, ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ಬಂದಿದೆ. ಪ್ರಜಾಪ್ರಭುತ್ವವನ್ನೇ ಅಸ್ಥಿರಗೊಳಿಸುವ, ಸಂವಿಧಾನ ದುರ್ಬಲಗೊಳಿಸಲು ರಾಜ್ಯಪಾಲರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರವು ಒಕ್ಕೂಟ ವ್ಯವಸ್ಥೆ ಮುಗಿಸುವ ದಿಕ್ಕಿನಲ್ಲಿ ಸಾಗಿದಂತೆ ಕಾಣುತ್ತಿದೆ. ವಿರೋಧ ಪಕ್ಷಗಳೇ ಇರದಂತೆ ನೋಡಿಕೊಳ್ಳುವ ಕೆಲಸ ನಿರಂತರವಾಗಿ ನಡೆಸುತ್ತಿದೆ ಎಂದು ಆರೋಪಿಸಿದರು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ವಿರೋಧ ಮಾಡುವ ಮುಖ್ಯಮಂತ್ರಿಗಳನ್ನು ಸಹ ಜೈಲಿಗೆ ಕಳಿಸಲಾಗುತ್ತಿದೆ. ಮಾಧ್ಯಮದವರನ್ನು ಸಹ ಜೈಲಿಗೆ ಹಾಕಿದ್ದಾರೆ. ಒಟ್ಟಿನಲ್ಲಿ ಪ್ರಶ್ನಿಸುವವರು ಇರಬಾರದು ಎಂಬ ಧೋರಣೆ ಅವರದ್ದಾಗಿದೆ. ಅದನ್ನು ಹಿಮ್ಮೆಟ್ಟಿಸಲು ಪ್ರತಿ ಜಿಲ್ಲೆಗಳಲ್ಲೂ ಜನಾಂದೋಲನ ನಡೆಯಲಿದೆ ಎಂದರು. ಅನಿಲ ದಳವಾಯಿ, ರಾಜೇಶ ಚಿಕ್ಕಬಳ್ಳಾಪುರ, ಆರ್.ಕೆ.ಪಾಟೀಲ, ಸಲೀಂ ಸುದ್ದಿಗೋಷ್ಠಿಯಲ್ಲಿದ್ದರು.