ಮಹೇಶ ಜೋಶಿ ನಿಲುವಿನಿಂದ ಜನರ ಮನಸ್ಸಿಗೆ ಘಾಸಿ: ಒಕ್ಕೂಟದ ಜಿಲ್ಲಾಧ್ಯಕ್ಷ ಎಸ್.ಬಸವರಾಜು ಅತೃಪ್ತಿ

Union of Folk and Street Drama Troupes press conference Mandya
Published on

ಮಂಡ್ಯ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಭೂತ ಪೂರ್ವ ಯಶಸ್ಸನ್ನು ಕಂಡಿದೆ. ಆದರೆ ಸಮ್ಮೇಳನ ಮುಗಿದೊಡನೇ ಮಹೇಶ ಜೋಶಿ ಅವರು ತೆಗೆದುಕೊಂಡಿರುವ ನಿರ್ಧಾರಗಳು ಜಿಲ್ಲೆಯ ಜನರ ಮನಸ್ಸಿಗೆ ಘಾಸಿಯನ್ನುಂಟು ಮಾಡಿವೆ ಎಂದು ಜನಪದ ಮತ್ತು ಬೀದಿ ನಾಟಕ ಕಲಾತಂಡಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಎಸ್.ಬಸವರಾಜು ಅತೃಪ್ತಿ ಹೊರಹಾಕಿದರು.

ಸಮ್ಮೇಳನದ ಯಶಸ್ಸಿಗೆ ಹಲವರ ಕೊಡುಗೆಯಿದೆ. ಆದರೆ ಯಶಸ್ಸಿಗೆ ದುಡಿದ ಜಿಲ್ಲಾ ಕಸಾಪ ಆಡಳಿತ ಮಂಡಳಿ ವಿಸರ್ಜನೆ ಮಾಡಿರುವುದು ಸರಿಯಲ್ಲ. ಸಮ್ಮೇಳನದ ವೇಳೆಯಲ್ಲಿ ಹಲವು ಲೋಪದೋಷಗಳು ನಡೆದರೂ, ಜಿಲ್ಲೆಯ ಅಸ್ಮಿತೆಯನ್ನು ಉಳಿಸಿಕೊಳ್ಳುವ ಸಲುವಾಗಿ ಯಾವುದನ್ನು ದೊಡ್ಡದು ಮಾಡದೇಯಶಸ್ಸಿಗೆ ದುಡಿದ್ದು, ನಮ್ಮ ತಾಳ್ಮೆಯನ್ನು ದುರ್ಬಲವೆಂದು ತಿಳಿದು ಮಹೇಶ ಜೋಶಿ ವರ್ತಿಸಿರುವುದು ಸರಿಯಲ್ಲ. ಕೂಡಲೇ ಮಹೇಶ ಜೋಶಿ ತಮ್ಮ ತಪ್ಪನ್ನು ಸರಿಪಡಿಸಿ, ಸಮ್ಮೇಳನದ ಯಶಸ್ಸಿಗೆ ದುಡಿದವರಿಗೆ ಕೃತಜ್ಞತೆ ಸಲ್ಲಿಸಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸಲಹೆ ನೀಡಿದರು.

ಕಾರ್ಯದರ್ಶಿ ಟಿ.ಎಂ.ನಾಗರಾಜು, ಸದಸ್ಯ ಎಚ್.ಪಿ.ವೈರಮುಡಿ, ಸಹ ಕಾರ್ಯದರ್ಶಿ ಡಿ.ಉಮಾಪತಿ, ರೋಜ್‌ಮೇರಿ, ಶ್ವೇತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net