ಹಿರೇಗುತ್ತಿಗೆ ಕೇಂದ್ರ ಸಚಿವರ ಭೇಟಿ

Central Minister
Published on

ಗೋಕರ್ಣ: ಕೇಂದ್ರ ಸಚಿವ ಶ್ರೀಪಾದ ನಾಯ್ಕ ಅವರು ಸೋಮವಾರ ಗೋವಾಕ್ಕೆ ತೆರಳುವ ವೇಳೆ ಹತ್ತಿರದ ಹಿರೇಗುತ್ತಿ ಶ್ರೀ ಬಾರ್ಕೂರು ಮಹಾಸಂಸ್ಥಾನ ಮಠದ ಯಶೋದಾ ವನಕ್ಕೆ ಭೇಟಿ ನೀಡಿದರು.

ಯಶೋದಾ ವನದಲ್ಲಿ ಫೆಬ್ರವರಿ ತಿಂಗಳಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ ಶ್ರೀನಾಡ ವೆಂಕಟೇಶ್ವರ ಮೂರ್ತಿ ಪ್ರತಿಷ್ಠಾಪನಾ ಮಹೋತ್ಸವದ ಕುರಿತು ಹಿರಿಯ ವಕೀಲ ನಾಗರಾಜ ನಾಯಕ ಅವರು ಸಚಿವರಿಗೆ ವಿವರಿಸಿದರು. 12 ಅಡಿ ಎತ್ತರದ ಮೂರ್ತಿ ಪ್ರತಿಷ್ಠಾಪನಾ ಸಮಾರಂಭಕ್ಕೆ ಸಚಿವರಿಗೆ ಮಹಾಸಂಸ್ಥಾನ ಉತ್ತರ ಕನ್ನಡ ಘಟಕದ ವತಿಯಿಂದ ಅಧ್ಯಕ್ಷ ಡಿ.ಎನ್. ನಾಯಕ ಆಮಂತ್ರಣ ನೀಡಿದರು. ಗ್ರಾಮಸ್ಥರ ವತಿಯಿಂದ ಸಚಿವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಚಿವರು ಗ್ರಾಮದ ಪುರಾತನ ಶ್ರೀಬ್ರಹ್ಮಜಟಕ ಮಂದಿರಕ್ಕೆ ತೆರಳಿ ದರ್ಶನ ಪಡೆದರು.

ಕಟ್ಟಡ ಸಮಿತಿ ಅಧ್ಯಕ್ಷ ಆನಂದ ಕವರಿ, ಮಹಾಸಂಸ್ಥಾನ ಘಟಕದ ಕಾರ್ಯದರ್ಶಿ ಎನ್.ಕೆ. ನಾಯಕ, ಸತ್ಯಾನಂದ ನಾಯಕ, ರಾಜು ಕೆ. ಗಾಂವಕರ, ಸುರೇಂದ್ರ ನಾಯಕ, ರಾಜೇಶ ನಾಯಕ, ಎನ್. ರಾಮು ಮತ್ತು ಘಟಕದ ಪದಾಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net