

ರಾಯಚೂರು ಕೇಂದ್ರ ಸಚಿವ ಪ್ರಹ್ಲಾದ ಜೋಷಿಯವರು ಏಮ್ಸ್ ಮಂಜೂರಾತಿ ಕುರಿತಂತೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡುವ ಮೂಲಕ ಮತ್ತೊಮ್ಮೆ ಕುತಂತ್ರ ಮಾಡಿನ ಏಮ್ಸ್ ತಪ್ಪಿಸುವ ಹುನ್ನಾರ ಮಾಡುತ್ತಿದ್ದಾರೆಂದು ಹೋರಾಟಗಾರ ಡಾ.ಬಸವರಾಜ ಕಳಸ ಆರೋಪ ಮಾಡಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಏಮ್ಸ್‌ಸ್ಥಾಪಿಸುವ ಕುರಿತಾಗಿ ತಜ್ಞರ ಸಮಿತಿ ವರದಿ ಆಧಾರದ ಮೇಲೆ ಕೇಂದ್ರ ಸರ್ಕಾರ ನಿರ್ಧರಿಸುವದಾಗಿ ಹೇಳಿರುವ ಪ್ರಹ್ಲಾದ ಜೋಷಿಯವರು ರಾಯಚೂರಿನಲ್ಲಿ ಐಐಐಟಿ ಸ್ಥಾಪಿಸುವಾಗ ಯಾವ ತಜ್ಞರು ವರದಿ ನೀಡಿದ್ದರು ಎಂದು ಪ್ರಶ್ನಿಸಿದರು.
ಅವರ ಮಾತಿನ ದಾಟಿ ಮತ್ತೊಮ್ಮೆ ಜಿಲ್ಲೆ ಏಮ್ಸ್ ತಪ್ಪಿಸುವ ಹುನ್ನಾರ ಅಡಗಿರುವದು ಸ್ಪಷ್ಟ ಎಂದರು. ಏಮ್ಸ್ ಹೋರಾಟ ಸಮಿತಿಯಿಂದ ದೆಹಲಿಗೆ ನಿಯೋಗ ಹೋಗಿದ್ದಾಗ ಏಮ್ಸ್ ಹೋರಾಟಕ್ಕೆ ಬೆಂಬಲಿಸುವದಾಗಿ ಭರವಸೆ ನೀಡಿದ್ದರು. ಆದರೀತ ರಾಜ್ಯ ಸರ್ಕಾರ ಎಡಬಿಡಂಗಿತನದ ಕುರಿತು ಹೇಳುತ್ತಿದ್ದಾರೆ. ಅವರಲ್ಲಿಯ ಸ್ಪಷ್ಟತೆಯಿಲ್ಲದೇ ಎಡಬಿಡಂಗಿ ನಿಲುವು ಹೊಂದಿದ್ದಾರೆ ಎಂದು ಟೀಕಿಸಿದರು.
ರಾಯಚೂರಿನಲ್ಲಿ ಸ್ಥಾಪಿಸಬೇಕಿದ್ದ ಐಐಟಿಯನ್ನು ಧಾರವಾಡಕ್ಕೆ ಒಯ್ಯಲಾಯಿತು. ಆದರೆ ಧಾರವಾಡದಲ್ಲಿ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಮಂಜೂರಾದಾಗ ಯಾವ ತಜ್ಞರ ಸಮಿತಿಯೂ ವರದಿ ನೀಡಲಿಲ್ಲ. ಆಂಧ್ರದ ಮಂಗಳಗಿರಿಯಲ್ಲಿ ಏಮ್ಸ್, ಜಮ್ಮು ಕಾಶ್ಮೀರದಲ್ಲಿ ಎರಡು ಪ್ರತ್ಯೇಕ ಏಮ್ಸ್ ಸ್ಥಾಪಿಸುವಾಗ ಯಾವ ಸಮಿತಿ ವರದಿ ನೀಡಿತು ಎಂದು ತಾಕತ್ತಿದ್ದರೆ ಬಹಿರಂಗಪಡಿಸಬೇಕು.ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸುವಾಗ ಮಾತ್ರ ಅಧ್ಯಯನ ತಂಡ ವರದಿ ಮೇಲೆ ನಿರ್ಧರಿಸುವದಾಗಿ ಹೇಳಿರುವದು ಖಂಡನೀಯವೆಂದರು.
ಈ ಸಂದರ್ಬದಲ್ಲಿ ಜಾನವೆಸ್ಲಿ, ಕೆ.ಇ.ಕುಮಾರ, ರಮೇಶ ಕಲ್ಲೂರಕರ್, ವಿನಯ ಚಿತ್ರಗಾರ, ವೀರಭದ್ರಯ್ಯಸ್ವಾಮಿ, ಅಮರೇಗೌಡ ಪಾಟೀಲ್ ಇದ್ದರು.