ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ಕೇಂದ್ರ ಸಚಿವೆ ಭೇಟಿ

New Chndramauleshwara
Published on

ಹುಬ್ಬಳ್ಳಿ : ಇಲ್ಲಿನ ಉಣಕಲ್ಲನಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ಕೇಂದ್ರ ಯುವಜನ ಸೇವಾ ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವೆ ರಕ್ಷಾ ನಿಖಿಲ್ ಕಾಡ್ಸೆ ಶನಿವಾರ ಭೇಟಿ ನೀಡಿ, ದರ್ಶನ ಪಡೆದರು.

ನಂತರ ಮಾತನಾಡಿದ ಸಚಿವೆ ರಕ್ಷಾ, ಇಂತಹ ಪುರಾತನ ದೇವಸ್ಥಾನಗಳು ನೋಡಲು ಸಿಗುವುದು ಅಪರೂಪ. ಇಂತಹ ಶಿವನ ದೇವಸ್ಥಾನವು ಇತಿಹಾಸದ ಪುಟದಲ್ಲಿ ಸೇರಬೇಕು ಮತ್ತು ಕರ್ನಾಟಕದ ಪ್ರವಾಸ ತಾಣ ಆಗಬೇಕು. ಇದೊಂದು ಅದ್ಭುತ ದೇವಸ್ಥಾನ ಎಂದು ಹೇಳಿದರು.

ಶಾಸಕರಾದ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ, ಪಾಲಿಕೆ ಸದಸ್ಯರಾದ ತಿಪ್ಪಣ್ಣ ಮಜ್ಜಗಿ, ಉಮೇಶ್ ಕೌಜಗೇರಿ, ಸ್ಥಳೀಯರಾದ ಶಿವು ಪಾಟೀಲ, ರಾಜು ಅಡೊ್ಡೕಣಗಿ, ನವೀನ ಮಡಿವಾಳರ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net