ಜಾತಿಗಣತಿ ಸಮೀಕ್ಷಾ ವರದಿ ತಿರಸ್ಕರಿಸಿ ಕೇಂದ್ರ ಸಚಿವ ವಿ.ಸೋಮಣ್ಣ ಸಲಹೆ

somanna
Published on

ಮಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸಿದ್ದ ಸಾಮಾಜಿಕ,ಶೈಕ್ಷಣಿಕ ಸಮೀಕ್ಷಾ (ಜಾತಿ ಗಣತಿ) ವರದಿಯನ್ನು ತಿರಸ್ಕರಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಈಗಾಗಲೇ ಮನವಿ ಮಾಡಿದ್ದೇನೆ ಎಂದು ಕೇಂದ್ರ ರೈಲ್ವೇ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ಮಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಜನರಲ್ಲಿ ಗೊಂದಲ ನಿರ್ಮಾಣ ಮಾಡಿ ಕುರ್ಚಿ ಉಳಿಸಿಕೊಳ್ಳುವುದು ಇದರ ಹಿಂದಿನ ಉದ್ದೇಶವಾಗಿದೆ. ಯಾರಿಗೋ ಅನುಕೂಲ ಮಾಡಿ ಕೊಡಲು ತಮಗೆ ಬೇಕಾದಂತೆ ವರದಿ ಬರೆಸಿರುವುದು ಸರಿಯಲ್ಲ. ಈ ವರದಿಯ ಲಾಭ ನಿಜವಾಗಿ ಅಗತ್ಯ ಇರುವವರಿಗೆ ಸಿಗುವುದಿಲ್ಲ. ಲಕ್ಷಾಂತರ ಜನರಿಗೆ ಅನ್ಯಾಯವಾಗಲಿದೆ. ಆದ್ದರಿಂದ ಈ ವರದಿ ತಿರಸ್ಕರಿಸಿ, ಇನ್ನೊಂದು ಹೊಸದಾದ ವರದಿ ತಯಾರಿಸಿದರೆ ನಿಮಗೂ, ರಾಜ್ಯಕ್ಕೂ ಒಳ್ಳೆಯದಾಗುತ್ತದೆ. ಇಂತಹ ಅಪಚಾರದ ಕೆಲಸ ನಿಮ್ಮ ಸ್ಥಾನಕ್ಕೆ ಶೋಭೆಯಲ್ಲ ಎಂದವರು ಹೇಳಿದರು.

* ಕಾನೂನು ಕ್ರಮ ಸರ್ಕಾರದ ಜವಾಬ್ದಾರಿ: ಬಿಜೆಪಿ ಉಚ್ಛಾಟಿತ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎನ್ನಲಾದ ವಿಚಾರದಲ್ಲಿ ಮುಸ್ಲಿಂ ಯುವಕನೋರ್ವ ಆಡಿಯೋ ಹರಿಬಿಟ್ಟಿದ್ದು, ಅದರಲ್ಲಿ ಯತ್ನಾಳ್ ಅವರನ್ನು ತಲೆ ಕಡಿಯುವುದಾಗಿ ಹೇಳಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ವಿ.ಸೋಮಣ್ಣ, ಯತ್ನಾಳ್ ಭಾವನೆ ವ್ಯಕ್ತಪಡಿಸಿದ್ದಾರೆ. ಯಾರ ಜೀವ ತೆಗೆಯಲು ಯಾರಿಗೂ ಅಧಿಕಾರವಿಲ್ಲ. ಅಂತಹ ಪಾಪದ ಕೆಲಸ ಮಾಡುವವರ ವಿರುದ್ಧ ಯಾರೇ ಎಷ್ಟೇ ದೊಡ್ಡ ವ್ಯಕ್ತಿಯಾದರೂ ಅವರ ವಿರುದ್ಧ ರಾಜ್ಯ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net