

ಬೆಂಗಳೂರು: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದಿರುವ ಗಲಭೆ ಪ್ರಕರಣಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಸಿದ ಶೋಭಾ ಕರಂದ್ಲಾಜೆ, ಶಾಂತಿಯುತವಾಗಿ ನಡೆಯುತ್ತಿ ಗಣಪತಿ ಮೆರವಣಿಗೆಗೆ ಅನ್ಯಕೋಮಿನ ದುಷ್ಕರ್ಮಿಗಳು ಅಡ್ಡಿಪಡಿಸಿದ್ದಲ್ಲದೆ, ಗಣಪತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಚಪ್ಪಲಿ ಎಸೆದು ದಾಂದಲೆ ಮಾಡಿದ್ದಾರೆ. ಜಿಲ್ಲಾ ಉಸ್ತುವಾರ ಮಂತ್ರಿ ಮತ್ತು ಗೃಹಮಂತ್ರಿ ಇದೊಂದು ಚಿಕ್ಕ ಘಟನೆ ಎಂದು ಹೇಳುತ್ತಿದ್ದಾರೆ. ಅಂದರೆ ಇದಕ್ಕಿಂತ ಇನ್ನೂ ದೊಡ್ಡ ಘಟನೆ ಏನಾಗಬೇಕಿತ್ತು ? 25 ಹಿಂದುಗಳ ಅಂಗಡಿ ಸುಟ್ಟು, ಗಲಭೆ ಮಾಡಿರುವುದು ಚಿಕ್ಕ ಘಟನೆಯಾದರೆ, ಇದಕ್ಕಿಂತ ದೊಡ್ಡ ಘಟನೆ ಏನಾಗಬೇಕಿತ್ತು ಎಂದು ಪ್ರಶ್ನಸಿದ್ದಾರೆ.
ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದಾಗೆಲ್ಲಾ ಹಿಂದುಗಳಿಗೆ ಅಪಮಾನ ಮಾಡುವುದು, ಅಮಾಯಕರನ್ನು ಬಂಧಿಸುವುದನ್ನು ಮಾಡುತ್ತಲೇ ಬಂದಿದ್ದಾರೆ. ತಮ್ಮ ಮೇಲೆ ಹಾಗೂ ಇತರೆ ಮಂತ್ರಿಗಳ ಮೇಲೆ ಬಂದಿರುವ ಭ್ರಷ್ಟಾಚಾರ ಆರೋಪವನ್ನು ಮುಚ್ಚಿ ಹಾಕಿಕೊಳ್ಳುವುದಕ್ಕೆ ಕಾಂಗ್ರೆಸ್ ಇಂತಹ ಗಲಭೆಗೆ ಹುನ್ನಾರ ಮಾಡಿದೆಯಾ ಎಂಬ ಅನುಮಾನವೂ ಕೂಡಾ ಇದೆ. ಈ ಪ್ರಕರಣದಲ್ಲಿ ಎನ್‌ಐಎ ಮಧ್ಯಪ್ರವೇಶ ಮಾಡಿ ತನಿಖೆ ನಡೆಸಬೇಕು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಶೋಭಾ ಕರಂದ್ಲಾಜೆ ಆಗ್ರಹಿಸಿದರು.
ರಾಹುಲ್ ಗಾಂಧಿ ಅಮೆರಿಕಾದಲ್ಲಿ ಹೋಗಿ ಭಾರತದ ವಿರುದ್ಧ ಮಾತಾಡುತ್ತಾರೆ. ರಾಹುಲ್ ಗಾಂಧಿ ಲೋಕಸಭೆಯ ಪ್ರತಿಪಕ್ಷದ ನಾಯಕರಾ ? ಅಥವಾ ಭಾರತದ ಪ್ರತಿಪಕ್ಷದ ನಾಯಕರಾ ಎಂಬ ಪ್ರಶ್ನೆ ಉದ್ಭವಿಸಿದೆ. 50-60 ವರ್ಷ ಈ ದೇಶವನ್ನು ಆಳ್ವಿಕೆ ಮಾಡಿದ ಕಾಂಗ್ರೆಸ್ ನಾಯಕರು ವಿದೇಶದಲ್ಲಿ ನಿಂತು ಭಾರತದ ಅಭಿವೃದ್ಧಿ ಬಗ್ಗೆ ಟೀಕಿಸುವುದು ತಮ್ಮ ಹೆಜ್ಜೆ ಗುರುತನ್ನು ತಾವೇ ಒಮ್ಮೆ ನೋಡಿಕೊಳ್ಳಬೇಕು ಎಂದು ಶೋಭಾ ಕರಂದ್ಲಾಜೆ ಕುಟುಕಿದರು.