ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮುರುಘಾಮಠಕ್ಕೆ ಭೇಟಿ

14 Dwd 4
Published on

ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರದ ಟಿಕೆಟ್ ಘೋಷಣೆಯಾದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಗುರುವಾರ ಇಲ್ಲಿನ ಮುರುಘಾಮಠಕ್ಕೆ ಭೇಟಿ ನೀಡಿದ್ದರು. ಶ್ರೀ ಮಹಾಂತಪ್ಪಗಳ ಗದ್ದುಗೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು.
ಪ್ರತಿ ಬಾರಿ ಲೋಕಸಭಾ ಟಿಕೆಟ್ ಘೋಷಣೆಯÁದಾಗ ಮುರುಘಾಮಠಕ್ಕೆ ಭೇಟಿ ನೀಡಿದ್ದೇನೆ. ಈ ಬಾರಿಯೂ ಅಜ್ಜನ ಹಾಗೂ ಶ್ರೀಗಳ ಆಶೀರ್ವಾದ ಪಡೆದಿದ್ದೇನೆ ಎಂದರು.
ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಾದ ಮÁಡಿ ಸನ್ಮಾನಿಸಿ ಶುಭ ಕೋರಿದರು. ಮÁಜಿ ಶಾಸಕರಾದ ಅಮೃತ ದೇಸಾಯಿ, ಸೀಮÁ ಮಸೂತಿ, ಪಾಲಿಕೆ ಸದಸ್ಯರಾದ ಈರೇಶ ಅಂಚಟಗೇರಿ, ಶಿವು ಹಿರೇಮಠ, ನಿತಿನ ಇಂಡಿ, ಜ್ಯೋತಿ ಪಾಟೀಲ, ಮುಖಂಡರಾದ ಈರಣ್ಣ ಹಪ್ಪಳಿ, ಸಂಜಯ ಕಪಟಕರ, ಸುನೀಲ ಮೋರೆ, ವಿಯÁನಂದ ಶೆಟ್ಟಿ, ಬಸವರಾಜ ಗರಗ, ಟಿ.ಎ. ಪಾಟೀಲ ಹಾಗೂ ಕಾರ್ಯಕರ್ತರಿದ್ದರು.
ನಂತರ ಸಚಿವ ಜೋಶಿ ಮಾಜಿ ಶಾಸಕಿ ಸೀಮಾ ಮಸೂತಿ ಅವರ ಮನೆಗೆ ತೆರಳಿ ಫಲಾಹಾರ ಸೇವಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net