10ರಂದು ಮೈಸೂರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿ

Nitin Gadkari
Published on

ಮೈಸೂರು: ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಾ.10ರಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಮೈಸೂರಿಗೆ ಆಗಮಿಸಲಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಪ್ರತಾಪ ಸಿಂಹ, ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಅಂದು ಬೆಳಗ್ಗೆ 10.30ಕ್ಕೆ ಸರ್ಕಾರಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಕುಕ್ಕರಹಳ್ಳಿ ಕೆರೆ, ಮೇಟಗಳ್ಳಿಯಲ್ಲಿರುವ ರಾಯಲ್ ಇನ್ ಹೋಟೆಲ್ ಬಳಿ ರೈಲ್ವೆ ಸೇತುವೆ, ಮೈಸೂರು ಹೊರವರ್ತುಲ ರಸ್ತೆಯಲ್ಲಿ 7 ಕಡೆ ಗ್ರೇಟರ್ ಸಪರೇಟರ್ ನಿರ್ಮಾಣ ಕಾಮಗಾರಿಗೆ ಸಚಿವ ಗಡ್ಕರಿ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ಮೈಸೂರು-ಕುಶಾಲನಗರ ಹೆದ್ದಾರಿ ನಿರ್ಮಾಣ, ಹುಣಸೂರು ಬೈಪಾಸ್ ರಸ್ತೆಯನ್ನು 4 ಪಥವಾಗಿ ವಿಸ್ತರಣೆ, ಸೇತುವೆ ನಿರ್ಮಾಣ, ನಗರದಲ್ಲಿ ಅಪಘಾತ ವಲಯ ಸರಿಪಡಿಸುವ ಕಾಮಗಾರಿ,

ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ 1200 ಕೋಟಿ ರೂ.ವೆಚ್ಚದಲ್ಲಿ ಪ್ರವೇಶ ಮತ್ತು ನಿರ್ಗಮನ ರಸ್ತೆ ನಿರ್ಮಾಣ, ಮೈಸೂರು-ನಂಜನಗೂಡು ಹೆದ್ದಾರಿಯನ್ನು 6 ಪಥವಾಗಿ ವಿಸ್ತರಣಾ ಕಾಮಗಾರಿಗೂ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net