

ರಾಯಚೂರು ರಾಯಚೂರಿಗೆ ಏಮ್ಸ್ ಸೇರಿದಂತೆ ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗುವ ಎಲ್ಲಾ ಯೋಜನೆಗಳು, ಸಂಸ್ಥೆಗಳ ಮಂಜೂರಾತಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅಡ್ಡಿಯಾಗಿ ಧಾರವಾಡಕ್ಕೆ ಮಂಜೂರು ಮಾಡಿಕೊಳ್ಳುತ್ತಿದ್ದಾರೆಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಲಕ್ಷ÷್ಮಣ ದಸ್ತಿ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಜಿಲ್ಲೆಯಲ್ಲಿ ಐಐಟಿಯನ್ನು ವಂಚಿಸಿದAತೆ ಏಮ್ಸ್ ಮಂಜೂರಾತಿಗೆ ಅಡ್ಡಿಯಾಗಿದ್ದಾರೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲು ರೈಲು ಡಿವಿಜಿನ್‌ಗಳಿಗೆ ನಾಲ್ಕು ವಿಭಾಗಗಳಿಗೆ ಸೇರ್ಪಡೆ ಮಾಡಿದ್ದಾರೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳ ೧೩ ಪ್ರಮುಖ ಬೇಡಿಕೆಗಳಿಗೆ ಈ ಭಾಗದ ಸಂಸದರು ಮನವಿ ನೀಡಿ ಒತ್ತಾಯಿಸಲಾಗಿದೆ. ಹೊಸ ಉದ್ಯೋಗ ಸೃಷ್ಟಿ, ೩೭೧(ಜೆ) ವಿಶೇಷ ಪ್ಯಾಕೇಜ್ ಮಂಜೂರು, ಮೂರನೇ ಹಂತದ ಕೃಷ್ಣ ಯೋಜನೆ ಪೂರ್ಣಗೊಳಿಸಿ ರಾಷ್ಟಿçÃಯ ಯೋಜನೆ ಎಂದು ಘೊಷಿಸಲು ಏಳು ಜನ ಸಚಿವರಿಗೆ ಪತ್ರ ಬರೆದು ಒತ್ತಾಯಿಸಲಾಗಿದೆ. ಆದರೆ ಕೇಂದ್ರ ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶವನ್ನು ವೈರಿಯಂತೆ ನೋಡುತ್ತಿದೆ ಎಂದು ಟೀಕಿಸಿದರು. ವಿರೋಧ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆಯವರು ಸಹ ಈ ಭಾಗದ ಸಂಸದರು, ಸಚಿವರೊಂದಿಗೆ ಸೇರಿ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿ ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸಲುಒತ್ತಡ ಹಾಕಬೇಕೆಂದರು.
ಹೋರಾಟ ಸಮಿತಿ ಗೌರವಾಧ್ಯಕ್ಷ ಬಸವರಾಜ ದೇಶಮುಖ ಮಾತನಾಡಿ, ಕಲ್ಯಾಣ ಕರ್ನಾಟಕದ ಆಗುತ್ತಿರುವ ಅನ್ಯಾಯದ ವಿರುದ್ದ ನಿರಂತರವಾಗಿ ಸರ್ಕಾರಗಳ ಗಮನ ಸೆಳೆಯುವಪ್ರಯತ್ನಮಾಡಲಾಗುತ್ತಿದೆ. ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಸೇರಿದಂತೆ ಕಲ್ಯಾಣ ಕರ್ನಾಟಕದ ಅಭಿವೃದ್ದಿ ಆಗ್ರಹಿಸಿ ಹೋರಾಟ ಬೆಂಬಲಿಸುವದಾಗಿ ಹೇಳಿದರು.
ಈ ಸಂದರ್ಭದಲ್ಲಿ ಪ್ರೋ.ಆರ್.ಕೆ.ಹುಡಗಿ, ಡಾ.ಬಸವರಾಜ ಕಮನೂರು, ಡಾ.ರಜಾಕ ಉಸ್ತಾದ ,ವಿನಯ ಮಾಳಗೆ,
ವೈಜನಾಥ ಪಾಟೀಲ್ ತುಮಕೂರು, ಚಂದ್ರಶೇಖರ ಪಾಟೀಲ್, ರೋಹನಕುಮಾರ ಇದ್ದರು.
----------------