ಸುದೀರ್ಘ ಅನುಭವವೇ ಬೌದ್ಧಿಕ ಸಂಪತ್ತು

18BK1
ಬಸವಕಲ್ಯಾಣದ ಹರಳಯ್ಯ ಗವಿಯಲ್ಲಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಶ್ರೀ ಬಸವೇಶ್ವರ ಹಿರಿಯ ನಾಗರಿಕರ ಒಕ್ಕೂಟದ ಸಭೆಯನ್ನು ಕ್ಷೇತ್ರ ಸಮಿತಿ ಸಂಯೋಜಕ ಬಸವರಾಜ ಪಾಟೀಲ್ ಸೇಡಂ ಉದ್ಘಾಟಿಸಿದರು. ಪೂಜ್ಯ ಡಾ.ಗಂಗಾಂಬಿಕಾ ಅಕ್ಕ, ಎಸ್.ಎಸ್ ನಾಗರಾಳೆ, ಚನ್ನಪ್ಪ ಪ್ರತಾಪುರೆ, ಶಂಕರ ಕರಣೆ ಇತರರಿದ್ದರು.
Published on

ಬಸವಕಲ್ಯಾಣ: ಯೋಜನಾ ಕೌಶಲ, ಉತ್ತಮ ದೂರದೃಷ್ಟಿ, ಸುದೀರ್ಘ ಅನುಭವವೇ ಬೌದ್ಧಿಕ ಸಂಪತ್ತು ಎಂದು ಕ್ಷೇತ್ರ ಸಮಿತಿ ಸಂಯೋಜಕ, ಮಾಜಿ ಸಂಸದ ಬಸವರಾಜ ಪಾಟೀಲ್ ಸೇಡಂ ಹೇಳಿದರು.

ನಗರದ ಹರಳಯ್ಯ ಗವಿಯಲ್ಲಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಶ್ರೀ ಬಸವೇಶ್ವರ ಹಿರಿಯ ನಾಗರಿಕರ ಒಕ್ಕೂಟದ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವಕರಿಂದ ಬಿಡಿಸಲಾದ ಜಟಿಲ ಸಮಸ್ಯೆಗಳನ್ನು ಸಹ ತಮ್ಮ ಜೀವನದ ಅನುಭವದಿಂದ ಹಿರಿಯರು ಸರಳವಾಗಿ ಬಗೆಹರಿಸುತ್ತಾರೆ ಎಂದರು.

ಹಿರಿಯರ ಅನುಭವ ಮತ್ತು ಮಾರ್ಗದರ್ಶನ ಆರೋಗ್ಯಪೂರ್ಣ ಸಮಾಜಕ್ಕೆ ಅತ್ಯಾವಶ್ಯಕವಾಗಿದ್ದು, ಅನುಭವ ತುಂಬಿದ ವ್ಯಕ್ತಿಯೇ ಹಿರಿಯ ನಾಗರಿಕ. ನಕರಾತ್ಮಕ ವಿಚಾರಗಳನ್ನು ತೆಗೆದು ಹಾಕಿ ಸಕರಾತ್ಮಕವಾಗಿ ವಿಚಾರಗಳನ್ನು ಮುನ್ನೆಲೆಗೆ ತಂದು ಒಳ್ಳೆಯ ಕೆಲಸ ನಿರ್ವಹಿಸಬೇಕು. ಅಂದಾಗ ಮಾತ್ರ ನಗರಕ್ಕೆ ಕಳಸ ಪ್ರಾಯವಾಗಿರುವಂತಹ ವಾತಾವರಣ ಸೃಷ್ಟಿಸಬಹುದು ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಒಕ್ಕೂಟದ ಗೌರವಾಧ್ಯಕ್ಷರಾದ ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ಮಾತನಾಡಿ, ಹಿರಿಯ ನಾಗರಿಕರು ಸಮಯ ಮತ್ತು ಅವಕಾಶಗಳನ್ನು ಬಳಸಿಕೊಳ್ಳಬೇಕು. ಸೇವಾ ಮನೋಭಾವ ಬೆಳೆಸಿಕೊಂಡು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಪ್ರತಿದಿನ ಲಿಂಗಪೂಜೆ ಮಾಡಿಕೊಳ್ಳಬೇಕು. ಉಲ್ಲಾಸ ಹೊಂದಿರಬೇಕು. ಪುಸ್ತಕ ಹಂಚಿ ಓದುವ ಅಭಿರುಚಿ ಹೆಚ್ಚಿಸಿಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್.ಎಸ್.ನಾಗರಾಳೆ ಮಾತನಾಡಿ, ಶರೀರಕ್ಕೆ ವಯಸ್ಸಿದೆ, ಆದರೆ ಮನಸ್ಸಿಗೆ ವಯಸ್ಸಿಲ್ಲ. ನಾವು ಸಮಾಜಮುಖಿಯಾಗಿ ಸೇವೆ ಸಲ್ಲಿಸುವುದರ ಜತೆಗೆ ಸಮಾಜದ ಹಾಗೂ ತಂದೆ-ತಾಯಿಯ ಋಣ ತೀರಿಸಬೇಕಾಗಿದೆ. ಸೇವೆ-ತ್ಯಾಗಗಳಿಗೆ ನಾವೂ ಮಹತ್ವ ಕೋಡಬೇಕಾಗಿದೆ ಎಂದರು.

ಒಕ್ಕೂಟದ ಅಧ್ಯಕ್ಷ ಚನ್ನಪ್ಪ ಪ್ರತಾಪುರೆ ಪ್ರಾಸ್ತಾವಿಕ ಮಾತನಾಡಿ, ಒಕ್ಕೂಟದ ಕಾರ್ಯ-ಯೋಜನೆಗಳ ಮಾಹಿತಿ ನೀಡಿದರು.
ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ರಾಜಕುಮಾರ ಸಿರಗಾಪುರ, ಬಾಬುರಾವ ಹಿರೇನಾಗಾಂವಕರ ಮಾತನಾಡಿದರು.

ಪ್ರಮುಖರಾದ ವೀರಣ್ಣ ಹಲಶೆಟ್ಟಿ, ಜಗನ್ನಾಥ ಖೂಬಾ, ರೇವಣಪ್ಪ ರಾಯವಾಡೆ ಶಿವರಾಜ ಶಾಶೆಟ್ಟಿ, ಬಸವರಾಜ ತೊಂಡಾರೆ, ಬಸವರಾಜ ಶೀಲವಂತ, ಮಲ್ಲಿಕಾರ್ಜುನ ಕುರಕೋಟೆ, ವಿದ್ಯಾವತಿ ಶೇರಿಕಾರ, ಐ.ಎಸ್.ಪಂಚಾಳ, ಸಿದ್ದಣ್ಣ ಮಾರ್ಪಳ್ಳೆ, ಸರಸ್ವತಿ ಬಿರಾದಾರ ಇತರರಿದ್ದರು.

ಕಾರ್ಯದರ್ಶಿ ಪ್ರೊ.ಶಂಕರ ಕರಣೆ ಸ್ವಾಗತಿಸಿದರು. ಭೀಮಾಶಂಕರ ಮಾಶಾಳಕರ ವಂದಿಸಿದರು. ಶ್ರೀಶೈಲ ಹುಡೇದ ನಿರೂಪಣೆ ಮಾಡಿದರು. ಕೋಶಾಧ್ಯಕ್ಷ ಜಗನ್ನಾಥ ಕುಶನೂರೆ ಲೆಕ್ಕಪತ್ರದ ವಿವರಣೆ ವಾಚಿಸಿದರು. ಲಕ್ಷ್ಮೀಬಾಯಿ ಪಾಟೀಲ್ ಪ್ರಾಥನಾ ಗೀತೆ ಹಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net