ಕೊರಗರ ಕಾಲನಿಗೆ ಒಕ್ಕೂಟ ಮುಖಂಡರ ಭೇಟಿ

koraga
ಕೊರಗ ಸಂಘಗಳ ಮುಖಂಡರು ಮಿಯ್ಯರು ಮೂಡುಗುಡ್ಡೆ ಕೊರಗರ ಕಾಲನಿಗಳಿಗೆ ಭೇಟಿ ನೀಡಿದರು
Published on

ಕೊಕ್ಕರ್ಣೆ: ಬ್ರಹ್ಮಾವರ ತಾಲೂಕಿನ ಕಳ್ತೂರು, ಕಲ್ಲುಗುಡ್ಡೆ ಹಾಗೂ ನಾಲ್ಕೂರು ಗ್ರಾಪಂ ವ್ಯಾಪ್ತಿಯ ಮಿಯ್ಯರು ಮೂಡುಗುಡ್ಡೆ ಕೊರಗರ ಕಾಲನಿಗಳಿಗೆ ಕೊರಗ ಸಂಘಗಳ ಕರ್ನಾಟಕ-ಕೇರಳ ಒಕ್ಕೂಟ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು, ಕೊರಗ ಸಮುದಾಯದ ಹಿರಿಯ ಮುಖಂಡರು ಭೇಟಿ ನೀಡಿದರು.
ಮಿಯ್ಯರು ಮೂಡುಗುಡ್ಡೆ ಕಾಲನಿಯಲ್ಲಿ 9 ಕುಟುಂಬ ವಾಸವಿದ್ದು, ಮೂಲಸೌಕರ್ಯ ಹಾಗೂ ನೀರಿನ ಸಮಸ್ಯೆ ಹಂಚಿಕೊಂಡರು. ಕುಡಿಯುವ ನೀರು ಕಲುಷಿತಗೊಂಡಿದ್ದು, ಕುಡಿಯಲು ಸಾಧ್ಯವಿಲ್ಲ ಹಾಗೂ ಸೋಮು ಕೊರಗರ ಮನೆ ಬೀಳುವ ಪರಿಸ್ಥಿಯಲ್ಲಿದ್ದು, ಸ್ನಾನಗೃಹ, ಶೌಚಗೃಹ ಸಮಸ್ಯೆ ಬಗ್ಗೆ ಹಂಚಿಕೊಂಡರು.

ಚರ್ಚೆ ನಡೆಸಿ ಗ್ರಾಪಂ ಅಭಿವೃದ್ಧಿ ಅಧಿಕಾರಿಯವರನ್ನು ಭೇಟಿ ಮಾಡಿ, ಅವರನ್ನು ಗುಂಪಿಗೆ ಕರೆದುಕೊಂಡು ಬರಲಾಯಿತು. ಮೂರು ದಿನಗಳ ಒಳಗೆ ಬಾವಿ ನೀರು ಮತ್ತು ಟ್ಯಾಂಕ್ ಸ್ವಚ್ಛತೆ ಮಾಡಲಾಗುವುದು. ಸೋಮು ಅವರ ಮನೆ ರಿಪೇರಿ ಮಾಡಿಸುವುದಾಗಿ ಪಿಡಿಒ ಭರವಸೆ ನೀಡಿದರು.
ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ, ಕೋಶಾಧಿಕಾರಿ ದಿವಾಕರ್ ಕಳ್ತೂರು, ಸಮುದಾಯದ ಮುಖಂಡರಾದ ಮತ್ತಾಡಿ ಕಾಯರಪಾಲ್ಕೆ ಮೋಹನ್ ಅಡ್ವೆ, ಪುತ್ರನ್ ಹೆಬ್ರಿ, ಬೊಗ್ರ ಕೊಕ್ಕರ್ಣೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net