ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜೀನಾಮೆಗೆ ಒತ್ತಾಯ

SVR PROTEST
Published on

ಸವಣೂರ: ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಪಟ್ಟಣದ ಕಂದಾಯ ಇಲಾಖೆ ಕಚೇರಿ ಮುಂಭಾಗದಲ್ಲಿ ದಲಿತ ಪ್ರಮುಖರು ಶುಕ್ರವಾರ ಶಿರಸ್ತೇದಾರ್ ತ್ರೀವೇಣಿ ನೀರಲಕಟ್ಟಿ ಅವರ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿದರು.

ಲಕ್ಷ್ಮಣ್ಣ ಕನವಳ್ಳಿ, ಗಂಗಪ್ಪ ಹರಿಜನ, ಆನಂದ ವಡಕ್ಕಮ್ಮನವರ, ನಾಗರಾಜ ಹರಿಜನ, ರಾಘವೇಂದ್ರ ಬಾಲೇಹೊಸೂರ, ಸುರೇಶ ತಳವಾರ, ಮಂಜುನಾಥ ಮೆಳ್ಳಳ್ಳಿ, ಮುತ್ತು ಲಕ್ಷೆ್ಮೕಶ್ವರ, ಲಕ್ಷ್ಮಣ ಮುಗಳಿ, ರಾಜು ಮರಗಪ್ಪನವರ, ಶಂಕರ ಮರಗಪ್ಪನವರ, ದ್ಯಾಮಣ್ಣ ಪೂಜಾರ, ಎಂ.ಆರ್. ಮೈಲಮನವರ, ಮನೋಜ ದೊಡ್ಡಮನಿ, ಇತರರಿದ್ದರು.

ಹಿರೇಕೆರೂರಲ್ಲೂ ಕಾಂಗ್ರೆಸ್ ಆಕ್ರೋಶ: ಕೇಂದ್ರ ಗೃಹ ಸಚಿವ ಅಮಿತ್ ಷಾ ಲೋಕಸಭೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ ಎಂದು ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ದುರ್ಗಪ್ಪ ನೀರಲಗಿ ತಿಳಿಸಿದರು.

ಪಟ್ಟಣದದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಅತ್ಯುನ್ನತ ಸ್ಥಾನದಲ್ಲಿರುವ ಅಮಿತ್ ಷಾ ಅವರು ಬಹು ಸಮುದಾಯ ಹಾಗೂ ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ. ಹೀಗಾಗಿ, ಅವರನ್ನು ತಕ್ಷಣವೇ ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ಭರಮಣ್ಣ ಹರಿಜನ, ಮಾಲತೇಶ ಬೆಟಕೆರೂರ, ಮಂಜು ಶಿವನಕ್ಕನವರ, ಪರಶುರಾಮ ಎತ್ತಿನಹಳ್ಳಿ, ಮಲ್ಲೇಶಪ್ಪ ಬಸರಿಹಳ್ಳಿ, ನಾಗಪ್ಪ ಸುತ್ತಕೋಟಿ, ಶಿವಾಜಿ ದೊಡ್ಡಮನಿ, ಕಾಂತೇಶ ಯಡಗೋಡಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net