ದೇಶದ ಆಭಿವೃದ್ಧಿಯಲ್ಲಿ ಅಮೃತ ಪೀಳಿಗೆ ಕೊಡುಗೆ ಬಹುಮುಖ್ಯ: ಶೋಭಾ ಕರಂದ್ಲಾಜೆ

udp-23-shobha 1
Published on

ಉಡುಪಿ: ಭಾರತದಲ್ಲಿ ದೇಶದ ಆಸ್ತಿತ್ವ ಉಳಿಸಲು ಹೋರಾಟ ಮಾಡಿದವರಿಗೆ ಸಮರ್ಪಕ ಗೌರವ ಲಭಿಸಿಲ್ಲ. ಅದರೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ 9 ವರ್ಷಗಳಿಂದ ದಾಸ್ಯದ ಮಾನಸಿಕತೆಯನ್ನು ಹೋಗಲಾಡಿಸಲು ಮುಂದಾಗಿದೆ. ಭಾರತವನ್ನು ಜಗತ್ತಿನ ನಂ. 1 ದೇಶವನ್ನಾಗಿ ಮಾಡಲು ಸ್ವಾತಂತ್ರ ಅಮೃತ ಕಾಲದಲ್ಲಿರುವ ಯುವಪೀಳಿಗೆಯ ಕೊಡುಗೆ ಬಹುಮುಖ್ಯವಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಬುಧವಾರ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಕೇಂದ್ರ ಸಂವಹನ ಇಲಾಖೆ, ವಾರ್ತಾ ಮತ್ತು ಪ್ರಸಾರ ಸಚಿವಾಲಯ ಸಂಯುಕ್ತ ಆಶ್ರಯದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ, ಬಡವರ ಕಲ್ಯಾಣ, ಪ್ರಧಾನ ಮಂತ್ರಿ ಮಿಷನ್​ ಫಾರ್​ ಇಂಡಿಯಾ-2047, ಕೇಂದ್ರ ಸರ್ಕಾರದ ಯೋಜನೆಗಳು, ಪಿ.ಎಂ ಪ್ರಣಾಮ್​ ಹಾಗೂ ಏಕ ಭಾರತ ಶ್ರೇಷ್ಠ ಭಾರತ ಕುರಿತು ವಿಶೇಷ ಛಾಯಾ ಚಿತ್ರ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ$್ಯ ಬಂದಿದ್ದರೂ ಬ್ರೀಟಿಷರು ರೂಪಿಸಿದ ಕಾನೂನುಗಳೇ ಇಂದಿಗೂ ಜಾರಿಯಲ್ಲಿವೆ. ಹೀಗಾಗಿ ಐಪಿಸಿಯಲ್ಲಿ ಸಮಗ್ರ ಬದಲಾವಣೆ ತರಲಾಗುತ್ತಿದ್ದು, ಜನರಿಗೆ ತೊಂದರೆ ಎಣಿಸಿದ 1500ಕ್ಕೂ ಅಧಿಕ ಅನಾವಶ್ಯಕ ಕಾನೂನುಗಳನ್ನು ರದ್ದು ಮಾಡಲಾಗಿದೆ ಎಂದರು.

ಭಾರತ ಅಹಾರೋತ್ಪಾದನೆಯಲ್ಲಿ ಸ್ವಾವಲಂಬಿಯಾಗುತ್ತಿದ್ದು, ಅಹಾರ ಧಾನ್ಯಗಳ ರಪ್ತಿನಲ್ಲಿ 8ನೇ ಸ್ಥಾನದಲ್ಲಿದೆ. ಮೊಬೈಲ್​ ರಪ್ತಿನಲ್ಲಿ 2ನೇ ಹಾಗೂ ಅಟೋಮೊಬೈಲ್​ ವಸ್ತುಗಳ ರಪ್ತಿನಲ್ಲಿ 3ನೇ ಸ್ಥಾನದಲ್ಲಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ನಂ. 1 ಸ್ಥಾನ ಪಡೆಯಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.

ಶಾಸಕ ಯಶ್​ಪಾಲ್​ ಎ. ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ರಾವೇಂದ್ರ ಎ., ಕ್ಷೇತ್ರ ಪ್ರಚಾರಾಧಿಕಾರಿ ಜೆ. ತುಕಾರಾಂ ಗೌಡ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅನುಷಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net