ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಎಂಎಸ್‌ಎಂಇ ಸಂಪರ್ಕ ಶಿಬಿರ; ಸಾಲ ಅನುಮೋದನೆ, ಮಂಜೂರಾತಿ ಪತ್ರ ವಿತರಣೆ

mng- mar 9- Union bank
Published on

ಮಂಗಳೂರು: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ದೇಶಾದ್ಯಂತ ಮೆಗಾ ಎಂಎಸ್‌ಎಂಇ ಸಂಪರ್ಕ ಶಿಬಿರ ಪ್ರಾರಂಭಿಸಿದ್ದು, ಈ ಅಭಿಯಾನದ ಭಾಗವಾಗಿ ಮಂಗಳೂರಿನ ಪ್ರಾದೇಶಿಕ ಕಚೇರಿ ವತಿಯಿಂದ ಪಣಂಬೂರಿನ ಬಿಡಿಸಿ ಹಾಲ್‌ನಲ್ಲಿ ಶಿಬಿರ ಜರುಗಿತು.

ಮಂಗಳೂರಿನ ವಲಯ ಮುಖ್ಯಸ್ಥೆ ರೇಣು ನಾಯರ್ ಅವರ ಮಾರ್ಗದರ್ಶನದಲ್ಲಿ ಆಯೋಜಿಸಿದ ಕಾರ್ಯಕ್ರಮವನ್ನು ಮುಂಬೈನ ಕೇಂದ್ರ ಕಚೇರಿಯ ಚೀಫ್ ಜನರಲ್ ಮ್ಯಾನೇಜರ್ ಸುದರ್ಶನ್ ಭಟ್, ಎಂಎಸ್‌ಎಂಇ ಇಲಾಖೆಯ ನಿರ್ದೇಶಕ ದೇವರಾಜ್, ಉಪ ವಲಯ ಮುಖ್ಯಸ್ಥ ಮೋಹನ್ ದಾಸ್ ಮತ್ತು ಪ್ರಾದೇಶಿಕ ಮುಖ್ಯಸ್ಥ ಎ.ರಾಜಮಣಿ. ಎಂಎಲ್‌ಪಿ ಮುಖ್ಯಸ್ಥ ಸುಬ್ರಮಣಿಯನ್ ಎಂ.ಎನ್ ಉದ್ಘಾಟಿಸಿದರು.

ಸ್ವಾಗತಿಸಿ, ಪ್ರಸ್ತಾವನೆಗೈದ ಮಂಗಳೂರು ಪ್ರಾದೇಶಿಕ ಮುಖ್ಯಸ್ಥ ಎ.ರಾಜಮಣಿ ಅವರು, ಈ ಕಾರ್ಯಕ್ರಮವು ಮುಖ್ಯವಾಗಿ ಅಸ್ತಿತ್ವದಲ್ಲಿರುವ ಮತ್ತು ಉದ್ದೇಶಿತ ಎಂಎಸ್‌ಎಂಇ ಗ್ರಾಹಕರನ್ನು ತಲುಪುವ ಗುರಿಯನ್ನು ಹೊಂದಿದೆ ಎಂದರು.

ಎಂಎಸ್‌ಎಂಇ ಇಲಾಖೆಯ ನಿರ್ದೇಶಕ ದೇವರಾಜ್, ವಿವಿಧ ಸರ್ಕಾರಿ ಪ್ರಾಯೋಜಿತ ಯೋಜನೆಗಳ ಅಡಿಯಲ್ಲಿ ಎಂಎಸ್‌ಎಂಇ ಗಳಿಗೆ ಲಭ್ಯವಿರುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.

ಎಂಎಸ್‌ಎಂಇ ಯೋಜನೆಯ ಕುರಿತು ಪ್ರಸ್ತುತಿಯನ್ನು ಕ್ರೆಡಿಟ್ ವಿಭಾಗದ ಮುಖ್ಯ ವ್ಯವಸ್ಥಾಪಕ ಹನುಮಂತರಾಯ ಅವರು ಮಾಡಿದರು.

ದಕ್ಷಿಣ ಕನ್ನಡದ ವಿವಿಧ ತಾಲ್ಲೂಕುಗಳ ಸುಮಾರು 400 ಕ್ಕೂ ಅಧಿಕ ಎಂಎಸ್‌ಎಂಇ ಉದ್ಯಮಿಗಳು ಭಾಗವಹಿಸಿದರು. 62 ಎಂಎಸ್‌ಎಂಇ ಘಟಕಗಳಿಗೆ ಸಾಲಗಳ ಪ್ರಧಾನ ಅನುಮೋದನೆ ಮತ್ತು ಮಂಜೂರಾತಿ ಪತ್ರಗಳನ್ನು ನೀಡಲಾಯಿತು. ಉಪ ಪ್ರಾದೇಶಿಕ ಮುಖ್ಯಸ್ಥ ಶಶಿ ಕುಮಾರ್ ಯು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net