ಕಲ್ಲೂರು ಎಜುಕೇಶನ್ ಟ್ರಸ್ಟ್ ನಿಂದ ಸಮವಸ್ತ್ರ ವಿತರಣೆ

IMG-20230908-WA0155
Published on

ಕಾರವಾರ: ಇಲ್ಲಿನ ಕಲ್ಲೂರು ಎಜುಕೇಶನ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಇಬ್ರಾಹಿಂ ಕಲ್ಲೂರು ಅವರು ತಾಲೂಕಿನ ಅಸ್ನೋಟಿ ಶಿವಾಜಿ ವಿದ್ಯಾ ಮಂದಿರ  ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳಿಗೆ  ಟ್ರಸ್ಟ್ ವತಿಯಿಂದ ಸಮವಸ್ತ್ರ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗುಡ್ಡಗಾಡು ಪ್ರದೇಶದ ಮಕ್ಕಳು ಇಲ್ಲಿಗೆ ಆಗಮಿಸಿ ಗುಣಮಟ್ಟದ ಶಿಕ್ಷಣ ಪಡೆಯುತ್ತಿರುವದು ಆಶಾದಾಯಕ ಸಂಗತಿ ಎಂದು.

ಈ ಶಾಲೆ ನಮ್ಮದು ಎಂಬ ಭಾವನೆಯನ್ನು ಇಟ್ಟುಕೊಂಡು ನನ್ನಿಂದಾದ ಶೈಕ್ಷಣಿಕ ಸೇವೆಯನ್ನು ಒದಗಿಸುತ್ತಿದ್ದೆನೆ ಎಂದರು.

ಇದು ನಿರಂತರವಾಗಿ ನಡೆಯುತ್ತಲೇ ಇರುತ್ತವೆ ಎಂದರು.

ಶಾಲೆಯ ಮುಖ್ಯಾಧ್ಯಪಕ ದಿನೇಶ ಗಾಂವಕರ್, ಕಲ್ಲೂರವರು ನಮಗೆ ಆದರ್ಶ ಮತ್ತು ಸಂತರಾಗಿ ಕಾಣುತ್ತಾರೆ ಅವರ ಮಾರ್ಗದರ್ಶನ ನಮಗೆ ಸದಾ ಇದೆ ಎಂದರು.

ವೇದಿಕೆಯ ಮೇಲೆ ಶಿಕ್ಷಕರಾದ ವಿಜಯಕುಮಾರ್ ನಾಯ್ಕ,ಸಂತೋಷ ಕಾಂಬ್ಳೆ ಉಪಸ್ಥಿತರಿದ್ದರು .

ಚಂದ್ರಕಲಾ ಬಿರಂಗತ ಸಂಗಡಿಗರು ಪ್ರಾರ್ಥಿಸಿದರು.ಶಿಕ್ಷಕ ಗಣೇಶ ಬಿಷ್ಠಣ್ಣನವರ ಸ್ವಾಗತಿಸಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net